Home » ಪ್ರೀತಿಯಿಂದ ಅನುಗ್ರಹ
 

ಪ್ರೀತಿಯಿಂದ ಅನುಗ್ರಹ

by Kundapur Xpress
Spread the love
  1. ಪ್ರೀತಿಯಿಂದ ಅನುಗ್ರಹ

ಒಮ್ಮೆ ಒಬ್ಬ ಭಕ್ತ ದೇವರಲ್ಲಿ ಹೀಗೆ ಬೇಡಿಕೊಂಡ: ‘ದೇವರೇ, ಈ ಬದುಕಿನಲ್ಲಿ ನಾನು ಅನುಭವಿಸುತ್ತಿರುವ ನೋವು, ದುಃಖ, ವೇದನೆಗಳನ್ನು ನಿವಾರಿಸು’. ಅದರಂತೆ: ‘ಇಲ್ಲ; ನಾನದನ್ನು ಮಾಡಲಾರೆ, ನೀನೇ ಅದನ್ನು ಕಳಚಿಕೊಳ್ಳಬೇಕು.’ ದೇವರೇ, ನನ್ನ ಮಗುವಿನ ಅಂಗವೈಕಲ್ಯವನ್ನು ಹೋಗಲಾಡಿಸು,’ ‘ಇಲ್ಲ, ನಾನದನ್ನು ಮಾಡಲಾರೆ, ಏಕೆಂದರೆ ಆತನ ಆತ್ಮವು ಪರಿಪೂರ್ಣವಾಗಿದೆ; ದೇಹವು ಕೇವಲ ತಾತ್ಕಾಲಿಕ.’ ‘ಓ ದೇವರೇ, ನನಗೆ ಸಹನೆಯನ್ನು ಕರುಣಿಸು,’ ‘ಇಲ್ಲ, ಸಹನೆ ಎನ್ನುವುದು ಯಾತನೆಯನ್ನು ಅನುಭವಿಸುವ ಮೂಲಕವೇ ನಿನಗೆ ಪ್ರಾಪ್ತವಾಗುತ್ತದೆ.’ ‘ದೇವರೇ, ಬದುಕಿನಲ್ಲಿ ನನಗೆ ಸಂತೋಷವನ್ನು ನೀನೇ ಪಡೆಯಬೇಕು.’ ‘ದೇವರೇ, ಜೀವನದಲ್ಲಿ ನನಗೆ ವೇದನೆಯು ಬಾರದಂತೆ ಅನುಗ್ರಹಿಸು,’ ಇಲ್ಲ, ವೇದನೆಯನ್ನು ಅನುಭವಿಸುವ ಮೂಲಕವೇ ನೀನು ನನಗೆ ಸಮೀಪವಾಗುವೆ.’ ದೇವರೇ, ನನಗೆ ಆತ್ಮೋನ್ನತಿಯನ್ನು ಕರುಣಿಸು’, ‘ಇಲ್ಲ, ನಿನ್ನ ಆತ್ಮೋದ್ಧಾರವನ್ನು ನೀನೇ ಸಾಧಿಸಬೇಕು, ಆದರೆ ನಿನ್ನನ್ನು ಸಾಧಕನಾಗಿಸುವಲ್ಲಿ ನಾನು ನಿನ್ನ ಶಿಲ್ಪಿಯಾಗುವೆನು.’ ‘ದೇವರೇ, ಬದುಕನ್ನು ಚೆನ್ನಾಗಿ ಅನುಭವಿಸಲು ಏನೇನು ಬೇಕೋ ಅವೆಲ್ಲವನ್ನು ನನಗೆ ಅನುಗ್ರಹಿಸು’, ‘ಇಲ್ಲ, ನಿನಗೆ ನಾನು ಬದುಕನ್ನೇ ಅನುಗ್ರಹಿಸಿದ್ದೇನೆ; ನಿನಗೇನು ಬೇಕೋ ಅವೆಲ್ಲವನ್ನೂ ನೀನು ಅದರಿಂದ ಪಡೆಯಬಹುದು, ಆನಂದಿಸಲೂಬಹುದು.’ ‘ಹಾಗಿದ್ದರೆ, ದೇವರೇ, ಇನ್ನು ಒಂದನ್ನು ಮಾತ್ರವೇ ನಿನ್ನಲ್ಲಿ ಬೇಡುವೆನು-ನೀನು ನನ್ನನ್ನು ಪ್ರೀತಿಸುವಷ್ಟೇ ಇತರರನ್ನು ನಾನು ಪ್ರೀತಿಸಲು ಸಾಧ್ಯವಾಗುವಂತೆ ಮಾಡು’, ‘ಓ, ಇದಾದರೆ ಸೈ, ಈಗ ನಿಜವಾಗಿಯೀ ನೀನು ನಿಜ ಭಕ್ತನೇ ಆಗಿರುವೆ…’.

   

Related Articles

error: Content is protected !!