Home » ಕಠೋರ ಸತ್ಯ
 

ಕಠೋರ ಸತ್ಯ

by Kundapur Xpress
Spread the love
  1. ಕಠೋರ ಸತ್ಯ

ನಮ್ಮ ಬಳಿ ಇರುವ ಸಂಪತ್ತನ್ನು ನಾವು ನಮ್ಮ ಒಡೆತನದಲ್ಲಿರಬಹುದಾದ ಮೋಟಾರು ಕಾರಿಗೆ ಹೋಲಿಸಬಹುದು. ಕಾರಿನಲ್ಲಿ ನಾವು ಎಲ್ಲಿ ಬೇಕೆಂದರಲ್ಲಿಗೆ ಹೋಗಬಹುದು. ಹಾಗೆಯೇ ದೇವಸ್ಥಾನಕ್ಕೂ ಹೋಗಬಹುದು, ನೈಟ್ ಕ್ಲಬ್ಬುಗಳಿಗೂ ಹೋಗಬಹುದು. ದೇವಸ್ಥಾನಕ್ಕೆ ಹೋದರೆ ಸಿಗುವ ಶಾಂತಿ, ಸಮಾಧಾನ, ಸಂತೋಷಗಳೇ ಬೇರೆ, ನೈಟ್ ಕ್ಲಬ್ಬುಗಳಿಗೆ ಹೋದರೆ ಸಿಗುವ ಸಂತೋಷವೇ ಬೇರೆ. ಮೊದಲನೆಯ ಸಂತೋಷವನ್ನು ನಾವು ನಮ್ಮ ಒಳಗಿನಿಂದಲೇ ಪಡೆಯಬಹುದಾದರೆ ಎರಡನೆಯ (ನೈಟ್‍ಕ್ಲಬ್‍ಗಳ) ಸಂತೋಷವನ್ನು ಹೊರಗಿನಿಂದ ಪಡೆಯಬೇಕಾಗುತ್ತದೆ. ನಿಜಕ್ಕಾದರೆ ಹೊರಗಿನಿಂದ ಪಡೆಯುವ ಎಲ್ಲ ಸುಖಸಂತೋಷಗಳು ಮೊದಲಾಗಿ ದೇಹಕ್ಕೆ ಸಂಬಂಧ ಪಡುವುದರಿಂದ ಅವು ಸಹಜವಾಗಿಯೇ ಕ್ಷಣಿಕವಾಗಿರುತ್ತವೆ. ಸುಖಸಂತೋಷಕ್ಕೆ ಆದಿ ಮತ್ತು ಅಂತ್ಯ ಇದೆ. ಏಕೆಂದರೆ ದೇಹಕ್ಕೆ ಸಾಕಷ್ಟು ಇತಿಮಿತಿಗಳಿವೆ. ಅದಕ್ಕೆ ನಾವು ಕೊಡುವ ಸುಖಸಂತೋಷಗಳನ್ನು ಯಾವತ್ತೂ ಒಂದು ಮಿತಿಯೊಳಗೇ ಇಡಬೇಕಾಗುತ್ತದೆ. ಅದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸುಖವನ್ನು ಕೊಟ್ಟರೆ ಅದು ಸುಲಭವಾಗಿ ರೋಗಗಳನ್ನು ಆಹ್ವಾನಿಸುತ್ತದೆ. ಆದುದರಿಂಲೇ ಅವು ಸುಖಾನುಭವದ ಬಳಿಕ ದುಃಖವನ್ನೂ ಕೊಡುತ್ತವೆ. ಇಂದ್ರಿಯ ಸುಖವನ್ನು ಹೆಚ್ಚು ಉಂಡಷ್ಟು ಅನಂತರದಲ್ಲಿ ಅದು ತರುವ ದುಃಖದ ಪ್ರಮಾಣವೂ ಹೆಚ್ಚು. ಮಾತ್ರವಲ್ಲ, ಎಷ್ಟು ಬೇಗನೆ ನಮ್ಮ ಇಂದ್ರಿಯಗಳಿಗೆ ಸುಖ ಸಿಗುವುದೋ ಅಷ್ಟೇ ಬೇಗನೆ ಅನಂತರದಲ್ಲಿ ದುಃಖದ ಅಧ್ಯಾಯವೂ ಆರಂಭವಾಗುತ್ತದೆ. ಬದುಕನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ನಾವು ಯಾವುದನ್ನೂ ಸುಖವೆಂದು ತಿಳಿದೆವೋ ಅನಂತರದಲ್ಲಿ ಅದು ದುಃಖವನ್ನೇ ನಮಗೆ ಕಟ್ಟಿಕೊಟ್ಟ ಉದಾಹರಣೆಗಳು ಸಿಗುತ್ತವೆ. ಆದರೆ ಇಂದ್ರಿಯ ಸುಖವೇ ಪರಮ ಸುಖವಾಗಿರುವ ನಮಗೆ ಬದುಕನ್ನು ಅವಲೋಕಿಸುವಷ್ಟು ವ್ಯವಧಾನ ಇದೆಯೇ? ನಿಜಕ್ಕಾದರೆ ಬದುಕಿನ ಕಠೋರ ಸತ್ಯವೇ ಇದಾಗಿದೆ!

   

Related Articles

error: Content is protected !!