ಮಂಗಳೂರು : ಟ್ವಿಟರ್ ನಲ್ಲಿ ನಕಲಿ ಖಾತೆ ಮೂಲಕ ತುಳುನಾಡಿನ ದೈವರಾದನೆ ಮತ್ತು ಮಹಿಳೆ ಬಗ್ಗೆಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಜಕ್ಕೂರು ಮುಖ್ಯ ರಸ್ತೆ ನಿವಾಸಿ ಶಿವರಾಜ್.ಹೆಚ್.ಕೆ ಎಂಬುವವರನ್ನು ಮಂಗಳೂರಿನ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ
ತುಳುನಾಡಿನ ದೈವರಾಧನೆ ಸಂರಕ್ಷಣೆ ಯುವ ವೇದಿಕೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿತ್ತು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗ್ಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೆನ್ ಠಾಣೆಯ ಇನ್ ಸ್ಪೆಕ್ಟರ್ ಸತೀಶ್ ಎಂ ಪಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು