ಕಾಸರಗೋಡು : ಆಲೆಟ್ಟಿ ಗ್ರಾಮ ಸಮೀಪದ ಹೊನ್ನೆಡಿ ಎಂಬಲ್ಲಿ ಕಾಲು ಸಂಕ ದಾಟುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನೀರು ಪಾಲಾದ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು ನಿನ್ನೆ ಅವರ ಮೃತದೇಹ ಪತ್ತೆಯಾಗಿದೆ
ಹೊನ್ನಡಿಯಂಬಲ್ಲಿ ಗುರುವಾರ ಸಂಜೆ ಕಾಲು ಸಂಕ ದಾಟುತ್ತಿದ್ದ ಸಂದರ್ಭದಲ್ಲಿ ನಾರಾಯಣ್ ಎಂಬವರು ಆಯತಪ್ಪಿ ನೀರಿಗೆ ಬಿದ್ದು ನೀರು ಪಾಲಾಗಿದ್ದರು ಮೂರು ದಿನ ಹುಡುಕಾಟ ಮೃತದೇಹ ನಡೆಸಿದರೂ ಪತ್ತೆ ಆಗಿರಲಿಲ್ಲ ನಿನ್ನೆ ರವಿವಾರ ಅಗ್ನಿಶಾಮಕದಳ ಪೊಲೀಸ್ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ಮತ್ತು ಸ್ಥಳೀಯ ಈಜುಗಾರರು ನಡೆಸಿದ ಶೋಧ ಕಾರ್ಯದಲ್ಲಿ ಮೃತದೇಹ ಪತ್ತೆಯಾಗಿದೆ