ಮಂಗಳೂರು: ಚಿಕ್ಕೋಡಿಯ ಜೈನಮುನಿ ಹತ್ಯಯನ್ನು ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯಿತು ಚಿಕ್ಕೋಡಿಯ ಜೈನಮುನಿ ನಂದಿ ಮಹಾರಾಜ ಅವರ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗೆ ಒತ್ತಾಯಿಸಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ನೇತೃತ್ವದಲ್ಲಿ ಸಮಗ್ರ ಜೈನ ಸಮಾಜ ವತಿಯಿಂದ ಮಂಗಳೂರು ನಗರದಲ್ಲಿ ಸೋಮವಾರ ಮೌನ ಪತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು
ಮಂಗಳೂರು ನಗರದ ಕ್ಲಾಕ್ ಟವರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮೂಡಬಿದರೆ ಜೈನಮಠದ ಡಾ. ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಲೇಖಕರು ಹಾಗೂ ಧಾರ್ಮಿಕ ಗ್ರಂಥಗಳನ್ನು ಬರೆದಿರುವ ಶ್ರೀ ಕಾಮಕುಮಾರ ನಂದಿ ಮಹಾರಾಜ ಅವರನ್ನು ದೇಶ ಕಂಡರಿಯದಂತಹ ರೀತಿಯಲ್ಲಿ ಹತ್ಯೆ ನಡೆಸಿರುವುದು ಖಂಡನೀಯ ಕೃತ್ಯ ಕೃತ್ಯ ನಡೆಸಿದವರು ಎಂದಿಗೂ ಜೈಲಿನಿಂದ ಹೊರಬರದಂತೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ವಾಮೀಜಿಯವರು ಆಗ್ರಪಡಿಸಿದರು