Home » “ಬ್ಯಾಂಕ್ ಬ್ಯಾಟಲ್”
 

“ಬ್ಯಾಂಕ್ ಬ್ಯಾಟಲ್”

by Kundapur Xpress
Spread the love

ಕುಂದಾಪುರ : ಡಾ.| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಬ್ಯಾಂಕ್ ಬ್ಯಾಟಲ್” ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಸ್ತಕ ವರ್ಷದ IIನೇ ಸೆಮಿಸ್ಟರನಲ್ಲಿ ಕಲಿತ “Law and Practice of Banking” ವಿಷಯಾಧಾರಿತ, ಕಾಲ್ಪನಿಕ ಬ್ಯಾಂಕ್ ವ್ಯವಹಾರದ ಮೂಲಕ ಪಾಠದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಮತ್ತು ಬ್ಯಾಂಕ್ ವ್ಯವಹಾರದ ಬಗ್ಗೆ ಸಂಪೂರ್ಣ ಪ್ರಾಯೋಗಿಕ ಅನುಭವ ನೀಡುವ ಉದ್ದೇಶದಿಂದ ಅಂತರ್ ತರಗತಿವಾರು ಸ್ವರ್ಧೆಯನ್ನು ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಗುಲ್ವಾಡಿ ಶಾಖೆಯ ಮ್ಯಾನೇಜರ್ ಶ್ರೀ. ಬಿ ಕರುಣಾಕರ್ ಶೆಟ್ಟಿಯವರು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವವಾಗಿದ್ದು, ಬ್ಯಾಂಕಿನ ಅಗತ್ಯತೆಯ ಬಗ್ಗೆ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ರೀತಿಯ ಸ್ವರ್ದೆಗಳಿಂದ ವಿದ್ಯಾರ್ಥಿಗಳಿಗೆ ಬ್ಯಾಂಕ್‍ನ ಸಂಪೂರ್ಣ ವ್ಯವಹಾರ ತಿಳಿಯಲು ಸಹಯವಾಗುತ್ತದೆ ಎಂದರು.
ಒಟ್ಟು 11 ತಂಡಗಳು ಸ್ವರ್ದಿಸಿದ್ದು, ಸ್ವರ್ದೆಯಲ್ಲಿ ಪ್ರಥಮ ಬಿ.ಕಾಂ (ಬಿ.) ವಿಭಾಗದ ತಂಡ ಪ್ರಥಮ, ಪ್ರಥಮ ಬಿ.ಕಾಂ (ಎ) ವಿಭಾಗ ತಂಡ ದ್ವಿತೀಯ ಸ್ಥಾನವನ್ನು ಪಡೆದು ವಿಜೇತರಾದರು. ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಪ್ರಾಸ್ತಾವಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಶರತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ, ಅಕ್ಷಯ್ ದೇವಾಡಿಗ ವಂದಿಸಿದರು. ವಿದ್ಯಾರ್ಥಿ ಪವಿತ್ರ ಪೈ ಪ್ರಾರ್ಥಿಸಿ, ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

   

Related Articles

error: Content is protected !!