ಕುಂದಾಪುರ : ಮಂಗೋಲಿಯದಲ್ಲಿ ನಡೆಯುವ ಅಂತರಾಷ್ಟ್ರೀಯ ಓಲ್ಡ್ ಪವರ್ ಲಿಫ್ಟಿಂಗ್ ಆಯ್ಕೆ ಸ್ಪರ್ಧೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣ (ರಾಜಂ )ನಲ್ಲಿ ನಡೆದ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ M-1 66 ಕೆ.ಜಿ ವಿಭಾಗದ 1 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಪಡೆದುರುವೊಂದಿಗೆ 4ನೇ ಬಾರಿ ಆಲ್ ಇಂಡಿಯಾ ಚಾಂಪಿಯನ್ ಹಾಗೂ 4ನೇ ಆಲ್ ಇಂಡಿಯಾ ನೂತನ ಡೆಡ್ ಲಿಫ್ಟ್ ದಾಖಲೆಯೊಂದಿಗೆ 3ನೇ ಬಾರಿಗೆ ಅಂತರಾಷ್ಟ್ರೀಯ ಕ್ರೀಡಾಪಟುವಾದ ಸತೀಶ್ ಖಾರ್ವಿ ಇವರು ತನ್ನ ದಾಖಲೆ ತಾನೇ ಮುರಿದಿದ್ದಾರೆ
ಸತೀಶ್ ಖಾರ್ವಿ ರವರು ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ಮಿನ ವ್ಯವಸ್ಥಾಪಕ ಹಾಗೂ ಖಾರ್ವಿ ಕೇರಿ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾಗಿರುತ್ತಾರೆ
1) 2019-ರಲ್ಲಿ 210 ಕೆಜಿ ಆಲ್ ಇಂಡಿಯಾ ನೂತನ ದಾಖಲೆ ಕೇರಳ
2) 2021- ರಲ್ಲಿ 217.5 ಕೆಜಿ ಆಲ್ ಇಂಡಿಯಾ ನೂತನ ದಾಖಲೆ ಕೇರಳ
3) 2022- ರಲ್ಲಿ 220 ಕೆಜಿ ಆಲ್ ಇಂಡಿಯಾ ನೂತನ ದಾಖಲೆ ಮಹಾರಾಷ್ಟ್ರ 220 ಕೆಜಿ
4) 2023- ಆಲ್ ಇಂಡಿಯಾ ನೂತನ ದಾಖಲೆ ಆಂಧ್ರ ಪ್ರದೇಶ್ 221 ಕೆಜಿ ಸತೀಶ್ ಖಾರ್ವಿ ಅವರ ಸತತ 4ನೇ ದಾಖಲೆ