ಕಾರ್ಕಳ : ಕಾರ್ಕಳ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಒಬ್ಬರು ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆಕಾರ್ಕಳ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಎಚ್ ಸಿ ಪ್ರಶಾಂತ್ ಎಂಬವರು ಕಾರ್ಕಳದ ಮಿಯ್ಯಾರಿನ ತನ್ನ ಮನೆಯ ವಠಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಕಳೆದ ಹಲವು ದಿನಗಳಿಂದ ರಜೆಯಲಿದ್ದ ಪ್ರಶಾಂತ್ ಅವರು ತನ್ನ ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ