ಕುಂದಾಪುರ : ಬಾರಿನ ಸಿಬ್ಬಂದಿಗಳೆಂದರೆ ಬರೀ ಸರಾಯಿಯನ್ನು ಮಾರುವವರು ಮಾತ್ರವಲ್ಲ ಮಾನವತೆಯನ್ನು ಮೆರೆಯುವರು ಎಂದು ಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮದ ಚಾರು ಕೊಟ್ಟಿಗೆ ಅರ್ಚನಾ ಬಾರ್ ನ ಸಿಬ್ಬಂದಿಗಳು ಮಾಡಿ ತೋರಿಸಿದ್ದಾರೆ….
ನಿನ್ನೆ ದಿನ ಚಾರ್ ಕೊಟ್ಟಿಗೆ ಬಾರಿನ ವಿಶು ಅಣ್ಣ ( ವಿಶ್ವನಾಥ ಪೂಜಾರಿ) ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ತನ್ನೆಲ್ಲ ಲೆಕ್ಕಾಚಾರವನ್ನು ಪೂರೈಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗು ಒಂದು ಬಟ್ಟೆ ಇಲ್ಲದೆ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ನಿಂತಿರುತ್ತದೆ ಅಚಾನಕ್ಕಾಗಿ ಆ ಹುಡುಗಿಯನ್ನು ನೋಡಿದ ವಿಶು ಅಣ್ಣ ಒಂದು ಕ್ಷಣ ದಂಗಾಗಿ ಹೋಗುತ್ತಾರೆ ಈ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಪ್ರತಿಯೊಂದು ಚಿತ್ರಣವನ್ನು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡು ಮಗುವಿನ ರಕ್ಷಣೆಗೆ ದಾವಿಸುತ್ತಾರೆ ನಂತರ ಮಗುವಿನ ಹತ್ತಿರ ಮಗುವಿನ ಪೂರ್ವಾಪರವನ್ನು ವಿಚಾರಿಸಿ ಮಗುವನ್ನು ಅವರ ಮನೆಗೆ ತಲುಪಿಸಿರುತ್ತಾರೆ