ಕಾರ್ಕಳ: ಮಹಿಳೆಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ
ಯುವಕನ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಈದು ಗ್ರಾಮದ ಗುಮ್ಮೆತ್ತು ಹಾಡಿಯಲ್ಲಿ ಪತ್ತೆಯಾಗಿದೆ ಮೃತ ವ್ಯಕ್ತಿಯನ್ನು ಈದು ಗ್ರಾಮದ ಸಂತೋಷ ದೇವಾಡಿಗ ಯಾನೆ ಹರಿತನಯ ಎಂದು ಗುರುತಿಸಲಾಗಿದೆ.
ಜುಲೈ 14 ರಂದು ಕಾರ್ಕಳದ ಮಾರ್ಕೆಟ್ ರೋಡ್ ನಲ್ಲಿರುವ ಮಹಿಳಾ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಕಚೇರಿ ಸಹಾಯಕಿಯಾಗಿದ್ದ ಪ್ರಮೀಳಾ ಎಂಬವರು ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಮೀಳಾರ ಆತ್ಮಹತ್ಯೆಗೆ ಸಂಬಂಧಿಕ ಸಂತೋಷ್ ದೇವಾಡಿಗ ಕುಮ್ಮಕ್ಕು ಕಾರಣ, ಆತ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಪ್ರಮೀಳಾ ಅವರ ಸಹೋದರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಸಂತೋಷ್ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿತ್ತು. ಆ ಬಳಿಕ ಸಂತೋಷ್ ತಲೆಮರೆಸಿಕೊಂಡಿದ್ದರು. ಗುರುವಾರ ಸಂತೋಷ್ ಮೃತದೇಹ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.