ಬೆಂಗಳೂರು : ನಂದಿನಿ ಹಾಲಿನ ದರ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳವಾಗಲಿದ್ದು ಅಗಸ್ಟ್ 1 ರಿಂದ ಪರಿಷ್ಕ್ರತ ದರ ಜಾರಿಗೆ ಬರಲಿದೆ ಕೆಎಂಎಫ್ ಅಧ್ಯಕ್ಷರಾದ ಭೀಮ ನಾಯಕ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಮಾಲೋಚನೆ ನಡೆಸಿ ದರ ಏರಿಕಯ ವಿಷಯವನ್ನು ತಿಳಿಸಿದ್ದಾರೆ
ಕೆಎಂಎಫ್ ಒಂದು ಲೀಟರ್ ನಂದಿನಿ ಹಾಲಿಗೆ ಐದು ರೂಪಾಯಿ ಏರಿಕೆಯ ಪ್ರಸ್ತಾಪ ಪ್ರಸ್ತಾವನೆ ಇಟ್ಟಿದ್ದು ಸಿಎಂ ಸಿದ್ದರಾಮಯ್ಯನವರು ಪ್ರತಿ ಲೀಟರ್ ಗೆ ರೂ.3 ದರ ಏರಿಸಲು ಸಮ್ಮತಿಸಿದ್ದಾರೆ ಎಂದು ಭೀಮ್ ನಾಯಕ್ ತಿಳಿಸಿದ್ದಾರೆ
ಈ ಬಗ್ಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದ ಅವರು ನಂದಿನಿ ಹಾಲಿನ ಉಪ ಉತ್ಪನ್ನಗಳ ಬಗ್ಗೆ ದರ ಏರಿಕೆ ಸದ್ಯ ಆಗುವುದಿಲ್ಲ ಎಂದು ತಿಳಿಸಿದ್ದಾರೆ