ಕುಂದಾಪುರ : ಕಕ್ಕುಂಜೆ ರಸ್ತೆಯ ಮಕ್ಕಿಮನೆ ಸಮೀಪ ವೀಪರಿತ ಮಳೆಯಿಂದ ತೋಡಿಗೆ ಬಿದ್ದು ಮೃತ ಪಟ್ಟ ಹರ್ಕಾಡಿ ನಿವಾಸಿ ಗೋಕುಲದಾಸ್ ಪ್ರಭು (54) ಇವರ ಪತ್ನಿಗೆ ಸರಕಾರ ವಿಪತ್ತು ನಿಧಿಯಿಂದ ಮಂಜೂರದ 5 ಲಕ್ಷ ರೂಪಾಯಿಯ ಚೆಕ್ ನ್ನು ಶಾಸಕರಾದ ಶ್ರೀಯುತ ಕಿರಣ್ ಕುಮಾರ್ ಕೊಡ್ಗಿಯವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶೋಭಲಕ್ಷ್ಮಿ, R. I.ದಿನೇಶ್ ಹುದ್ದರ,V. A ಅನಿಲ್ ಕುಮಾರ್ ಶೆಟ್ಟಿ, ಸಹಾಯಕ ರಘುರಾಮ್ ಅಲ್ಲದೆ ಹಿರಿಯರಾದ ನಾರಾಯಣ ಶೆಣೈ ಗಾವಳಿ, ಶ್ರೀಧರ್ ಶೆಟ್ಟಿ ಬಿದ್ಕಲಕಟ್ಟೆ, ಮಧುವನ ಮಾಧವ ಹೆಗ್ಡೆ, ಶ್ರೀಮತಿ ಭಾಗೀರಥಿ ಪ್ರಭು, ಗ್ರಾಂ. ಪಂ. ಅಧ್ಯಕ್ಷರು ಜಗನ್ನಾಥ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ನರಾಡಿ, ನಾಗೇಶ್ ಪಡಿಯಾರ ಗಾವಳಿ, ಶಂಕರ ಮೊಗವೀರ ಮತ್ಯಾಡಿ, ಉದ್ಯಮಿ ಮಹೇಶ್ ಶೆಣೈ ಗಾವಳಿ, ಕೇಶವ್ ಪ್ರಭು ಗಾವಳಿ, ಉದ್ಭವ್ ಕುಮಾರ್ ಶೆಟ್ಟಿ, ಪ್ರಶಾಂತ್ ಕಕ್ಕುಂಜೆ, ಗ್ರಾಂ. ಪಂ. ಸದಸ್ಯರಾದ ಗಣೇಶ್ ಶೆಟ್ಟಿ ಕೊಳನಕಲ್, ಜಯಪ್ರಕಾಶ್ ಶೆಟ್ಟಿ ಚಿಟ್ಟಿಬೈಲು, ಮಾಜಿ ಸದಸ್ಯರಾದ ವಸಂತಿ ಶೆಟ್ಟಿ ಹರ್ಕಾಡಿ ಇತರರು ಹಾಜರಿದ್ದರು