Home » ಸತೀಶ್ ಖಾರ್ವಿಗೆ ಸನ್ಮಾನ
 

ಸತೀಶ್ ಖಾರ್ವಿಗೆ ಸನ್ಮಾನ

by Kundapur Xpress
Spread the love

ಕುಂದಾಪುರ :  ಶಾಸಕರಾದ ಕಿರಣ್ ಕೊಡ್ಗಿಯವರು ಸತೀಶ್ ಖಾರ್ವಿಯನ್ನು ಸನ್ಮಾನಿಸಿ. ಅವರು ಮಾತನಾಡಿ ಸತೀಶ್ ಖಾರ್ವಿಯವರ ಸಾಧನೆಯು ದೇಶ ಹಾಗೂ ರಾಜ್ಯಕ್ಕೆ ಹೆಮ್ಮೆತಂದಿದೆ ಅಲ್ಲದೆ ನಮ್ಮ ಕುಂದಾಪುರ ತಾಲೂಕಿಗೆ ಒಂದು ಗೌರವ ತಂದುಕೊಟ್ಟಿದ್ದಾರೆ.
ಸತೀಶ್ ಖಾರ್ವಿಯವರ ಹರ್ಕ್ಯುಲಸ್ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಒಳ್ಳೆಯ ತರಬೇತಿ ನೀಡಿ ಒಂದು ಕ್ರೀಡಾಪಟುಗಳನ್ನಾಗಿ ತಯಾರು ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಮೂಲಕ ಒಳ್ಳೆಯ ಕ್ರೀಡಾಪಟುಗಳು ಬೆಳೆಯಲಿ ದೇಶಕ್ಕೆ ಒಳ್ಳೆಯ ಕೀರ್ತಿಯನ್ನು ತರಲಿ ಎಂದು ಹಾರೈಸಿದರು.

ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಇವರು ಮಾತನಾಡಿ ಸತೀಶ್ ಖಾರ್ವಿಯು 25 ವರ್ಷ ಕ್ರೀಡಾಲೋಕದಲ್ಲಿ ಬೆವರು ಮಾತ್ರ ಅಲ್ಲ ರಕ್ತ ಸುರಿಸಿ ಮೇಲೆ ಬಂದವರು. ಆದರೆ ಯಾರು ಕೂಡ ಒಂದು ಚಪ್ಪಾಳೆ ತಟ್ಟಿರ್ಲಿಕ್ಕಿಲ್ಲ, ಬೆನ್ನು ತಟ್ಟಿರ್ಲಿಕ್ಕಿಲ್ಲ, ಹರ್ಷೋದ್ಧಾರ ಹಾಕಿರಲಿಕ್ಕಿಲ್ಲ ಆದರೂ ಕೂಡ ಅವರ 25ವರ್ಷದ ಕ್ರೀಡಾ ಬೆಳವಣಿಗೆ ನೋಡುತ್ತಿದ್ದರೆ ಏಕಲವ್ಯನ ಏಕಾಗ್ರತೆ ಅವರದ್ದಾಗಿದೆ ಎಂದರು. ಸತೀಶ್ ಅವರ ಪವರ್ ಲಿಫ್ಟಿಂಗ್ ನ್ನು ಯಾರೂ ಗುರುತಿಸದಿದ್ದರೂ ಕೂಡ ಅವರು ತನ್ನ ಕ್ರೀಡಾ ಕರ್ತವ್ಯದಿಂದ ಕುಗ್ಗದೆ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ಸತತವಾಗಿ ಇಂದು ಒಂದು ಹಂತಕ್ಕೆ ತಲುಪಿದ್ದಾರೆ. ಇವರಿಗೆ ಆ ಸಂದರ್ಭದಲ್ಲಿ ಯಾರು ಕೂಡ ಚಪ್ಪಾಳೆ ಹೊಡೆಯದಿದ್ದರೂ ಇಂದು ಕರ್ನಾಟಕದ ಗೃಹ ಸಚಿವರೇ ಮನೆಗೆ ಕರೆಸಿ ಅಭಿನಂದಿಸಿದ್ದಾರೆ ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಹೇಳಿದರು.

 

Related Articles

error: Content is protected !!