ಕೊಟೇಶ್ವರ : ನಮ್ಮ ಸಂಸ್ಕೃತಿಯ ಗತವೈಭವ ಕಂಡಾಗ ಅಲ್ಲಿ ಪ್ರಾರಂಭದಲ್ಲಿ ಕಾಣಸಿಗುವುದು ಸೈನಿಕರ ಮಹತ್ವ.ಭಾರತೀಯ ಸೈನ್ಯ ನಮಗೆ ಹೆಮ್ಮೆಯ ವಿಷಯ ಈ ವಿಶೇಷ ಸಂದರ್ಭ ನಮ್ಮ ಗುರುಕುಲ ಪಬ್ಲಿಕ್ ಸ್ಕೂಲ್ ನ ಪಾಲಾಗಿದೆ.ಯಾಕೆಂದರೆ ಭರತ ಬಾಬು ದೇವಾಡಿಗ ಈಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದು,ಈ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎನ್ನುವುದು ನಮ್ಮೆಲ್ಲರ ಖುಷಿಯ ಸಂಗತಿ.ತಂದೆ ತಾಯಿ ಗುರುಗಳಿಗೆ ಗೌರವಿಸಬೇಕು , ಅವರೇ ನಮ್ಮ ಜೀವನದಲ್ಲಿ ತಿರುವು ನೀಡಬಲ್ಲ ವಿಶೇಷ ವ್ಯಕ್ತಿಗಳು,ಇವರ ಮಾರ್ಗದರ್ಶನದಿಂದ ಬದುಕಿನ ಉನ್ನತಿಯನ್ನು ಕಾಣಲು ಸಾಧ್ಯ.ಇವರಲ್ಲದೆ ಶೇರ್ಖಾನ್ ಇನ್ನಿತರ ವ್ಯಕ್ತಿಗಳ ಜೀವನ ಕಥೆ ಸ್ಪೂರ್ತಿಯನ್ನು ನೀಡಿದೆ.
ಈ ಸ್ಥಾನದ ಅನುಭವಕ್ಕೆ ಇವೆಲ್ಲವೂ ಕಾರಣವಾಗಿದ್ದು ನೀವೆಲ್ಲ ದೃಢ ಮನಸ್ಸಿನಿಂದ ಅಣಿಯಾಗಬೇಕು.ಜೀವನ ಎಂಬುದು ಸುಲಭದ ಮಾತಲ್ಲ,ಸವಾಲುಗಳಿಂದ ಕೂಡಿರುತ್ತದೆ.ದೈಹಿಕವಾಗಿ,ಮಾನಸಿಕವಾಗಿ ಸದೃಢರಾಗಿರಬೇಕು ಎಂದು ತನ್ನ ಶಾಲೆಯ ದಿನ , ತರಬೇತಿಯ ಅನುಭವಗಳನ್ನು ಮಕ್ಕಳಲ್ಲಿ ಹೇಳಿ ಅವರ ಸ್ಪೂರ್ತಿಯ ಕ್ಷಣಗಳಿಗೆ ಕಾರಣರಾದರು.
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀ.ಸುನಿಲ್ ಪ್ಯಾಟ್ರಿಕ್ ರವರು ಸೇನೆಯ ಮಹತ್ವ ಹೇಳುವುದರ ಜೊತೆಗೆ ವಿದ್ಯಾರ್ಥಿಗಳು ಸಾಧನೆಯತ್ತ ಮುಖ ಮಾಡಿ ಹೆತ್ತವರಿಗೆ, ಶಾಲೆಗೆ ಕೀರ್ತಿ ತರಬೇಕೆಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಯ ಈ ಸಾಧನೆಯನ್ನು ಗುರುತಿಸಿ ಆತನನ್ನು ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀಯುತ . ಸುಭಾಶ್ಚಂದ್ರ ಶೆಟ್ಟಿ ದಂಪತಿಗಳು ಗೌರವಿಸಿ, ಸನ್ಮಾನಿಸಿದರು.ಕಾರ್ಯಕ್ರಮವನ್ನು ಪ್ರೌಢಶಾಲಾ ಸಂಯೋಜಕಿಯಾದ ಶ್ರೀಮತಿ ಸುಷ್ಮಾರವರು ಸ್ವಾಗತಿಸಿ,ವಂದಿಸಿದರು.

