ಬೆಂಗಳೂರು : ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಖೀಲ ಕರ್ನಾಟಕ ಕರ್ನಾಟಕ ಸ್ಫೊರ್ಟ್ಸ್ ಕರಾಟೆ ಅಸೋಸಿಯೆನ್ ವತಿಯಿಂದ ನಡೆದ 15 ನೇ ರಾಜ್ಯ ಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯೆನ್ ಶಿಫ್ 2024 ಇದರಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ವಿದ್ಯಾರ್ಥಿನಿ ಕುಮಾರಿ .ಝಾರ, ಸಬ್ ಜೂನಿಯರ್ ವಿಭಾದ 13 ರ ವಯೋಮಿತಿಯ ಉಡುಪಿ ಜಿಲ್ಲೆಯಿಂದ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದು, ಕುಮಿಟೆ ವಿಭಾಗದಲ್ಲಿ ರಾಜ್ಯ ಚಾಂಪಿಯೆನ್ ಆಗಿರುತ್ತಾಳೆ.
ರಾಜ್ಯ ಮಟ್ಟದಲ್ಲಿ ಆರಿಸಿ ಬಂದು, ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯೆನ್ ಶಿಪ್‍ಗೆ ಆಯ್ಕೆಯಾಗಿದ್ದಾಳೆ. ಹಾಗೂ 11ವಯೋಮಾನದ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಸಂತೋಷ್ ನಾಯ್ಕ್, -40 ಕೆಜಿ ಕಟಾ ವಿಭಾಗದಲ್ಲಿ ಕಂಚಿನ ಪದಕ ಮತ್ತು ಕುಮಿಟಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಕ್ರೀಡಾ ಕೂಟದಲ್ಲಿ, ರಾಜ್ಯದ 31 ಜಿಲ್ಲೆಯ 1220 ಕ್ರೀಡಾಳುಗಳು ಭಾಗವಹಿಸಿದ್ದರು. ಇವರಿಬ್ಫರೂ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ, ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ ಶಿಹಾನ್ ಶೇಖ್, ಬಸ್ರೂರು, ಹಾಗೂ ಸೇನ್ ಸಾಯಿ ಶಶಾಂಕ್ ಶೆಣೈ ಟಿ, ಇವರಿಂದ ತರಬೇತಿ ಪಡೆಯುತ್ತಿದ್ದಾರೆ.ವಿದ್ಯಾರ್ಥಿನಿಯರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.