Home » ಕರಾಟೆ : ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
 

ಕರಾಟೆ : ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ

by Kundapur Xpress
Spread the love

ಬೆಂಗಳೂರು : ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಖೀಲ ಕರ್ನಾಟಕ ಸ್ಫೊರ್ಟ್ಸ್ ಕರಾಟೆ ಅಸೋಸಿಯೆನ್ ವತಿಯಿಂದ ನಡೆದ 15 ನೇ ರಾಜ್ಯ ಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯೆನ್ ಶಿಫ್ 2024 ಇದರಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ,ಝಾರ,ಸಬ್ ಜೂನಿಯರ್ ವಿಭಾದ 13 ರ ವಯೋಮಿತಿಯ ಉಡುಪಿ ಜಿಲ್ಲೆಯಿಂದ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದು,ರಾಜ್ಯ ಮಟ್ಟದಲ್ಲಿ ಆರಿಸಿ ಬಂದು,ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯೆನ್ ಶಿಪ್‍ಗೆ ಆಯ್ಕೆಯಾಗಿದ್ದಾಳೆ.

ಈ ಕ್ರೀಡಾ ಕೂಟದಲ್ಲಿ,ರಾಜ್ಯದ 31 ಜಿಲ್ಲೆಯ 1220 ಕ್ರೀಡಾಳುಗಳು ಭಾಗವಹಿಸಿದ್ದರು,ಕುಮಿಟೆ ವಿಭಾಗದಲ್ಲಿ ರಾಜ್ಯ ಚಾಂಪಿಯೆನ್ ಆಗಿರುತ್ತಾಳೆ.ಇವಳಿಗೆ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ,ಶಿಹಾನ್ ಸಂದೀಪ್ ವಿ.ಕೆ., ಶಿಹಾನ್ ಕೀರ್ತಿ ಜಿ.ಕೆ., ಸೇನ್ ಸಾಯಿ ಶಿಹಾನ್ ಶೇಖ್,ಬಸ್ರೂರು,ಹಾಗೂ ಸೇನ್ ಸಾಯಿ ಶಶಾಂಕ್ ಶೆಣೈ ಟಿ, ಇವರು ತರಬೇತಿ ನೀಡಿದ್ದರು.ವಿದ್ಯಾರ್ಥಿನಿಯ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ,ಪ್ರಾಂಶುಪಾಲರು,ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.

   

Related Articles

error: Content is protected !!