Home » ಕುಂದಾಪುರ 37 ಲಕ್ಷ ನಗದು ವಶ
 

ಕುಂದಾಪುರ 37 ಲಕ್ಷ ನಗದು ವಶ

by Kundapur Xpress
Spread the love

ಕುಂದಾಪುರ 37 ಲಕ್ಷ ನಗದು ವಶ

ಕುಂದಾಪುರ: ನಗರದ ರಾಷ್ಟ್ರೀಯ ಹೆದ್ದಾರಿಯ ಕೆ ಎಸ್‌ ಆರ್‌ ಟಿ ಸಿ ಬಸ್ಡ್ಯಾಂಡ್‌ ಬಳಿಯಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 37 ಲಕ್ಷದ 49.500 ರೂ. ನಗದನ್ನು ಕುಂದಾಪುರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೋಲೀಸರ ಸಹಕಾರದೊಂದಿಗೆ ಎಫ್‌ ಎಸ್‌ ಟಿ ಯವರು ವಶಪಡಿಸಿಕೊಂಡಿದ್ದಾರೆ

ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯನಿರತರಾಗಿದ್ದ ಫ್ಲೈಯಿಂಗ್‌ ಸ್ಕ್ವಾಡ್‌ ತಂಡದ  ಜಗದೀಶ್‌ ನಾಯಕ್‌ ಹಾಗೂ ನೋಡೆಲ್‌ ಅಧಿಕಾರಿ ಮಹೇಶ ಹೊಳ್ಳ ರವರ ನೇತೃತ್ವದಲ್ಲಿ ಪೋಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ

ಉಡುಪಿ ನಿವಾಸಿಯಾದ ಪ್ರಸಾದ್‌ ಶೇಟ್‌ ಎಂಬವರು ಯವುದೇ ದಾಖಲಾತಿ ಇಲ್ಲದೇ ಹಣವನ್ನು ಉಡುಪಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದರು  ಫ್ಲೈಯಿಂಗ್‌ ಸ್ಕ್ವಾಡ್‌ ತಂಡದವರು ಮುಂದಿನ ಕ್ರಮಕ್ಕಾಗಿ ಹಣ ಮತ್ತು ಪ್ರಕರಣದ ವರದಿಯನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ತಂಡದವರು ವಶಪಡಿಸಿಕೊಂಡ ದೊಡ್ಡ ಮೊತ್ತ ಇದಾಗಿದೆ

   

Related Articles

error: Content is protected !!