Home » ಸ್ಕೂಟರ್‌ ಉರುಳಿ:ದಂಪತಿಗಳಿಗೆ ಗಾಯ
 

ಸ್ಕೂಟರ್‌ ಉರುಳಿ:ದಂಪತಿಗಳಿಗೆ ಗಾಯ

by Kundapur Xpress
Spread the love

ಪಡುಬಿದ್ರಿ: ಸ್ಕೂಟರ್ ನಿಂದ ಬಿದ್ದು, ದಂಪತಿಗಳಿಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳ್ ನಿಂದ ಉಡುಪಿಯತ್ತ ಹೋಗುತ್ತಿದ್ದ ಸ್ಕೂಟರ್‌ ಉರುಳಿ ಬಿದ್ದ ಪರಿಣಾಮ ಪಡುಬಿದ್ರಿ ಬೆಂಗ್ರೆಯ ಜಗದೀಶ ಪೂವಣಿ ಭಂಡಾರಿ ಮತ್ತು ಪತ್ನಿ ವಿನುತಾ ಗಾಯಗೊಂಡಿದ್ದಾರೆ. ಇಬ್ಬರನ್ನೂ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!