Home » ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ರಕ್ತವಾಂತಿ : ಚಿಕಿತ್ಸೆ ಫಲಕಾರಿ ಆಗದೆ ಸಾವು
 

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ರಕ್ತವಾಂತಿ : ಚಿಕಿತ್ಸೆ ಫಲಕಾರಿ ಆಗದೆ ಸಾವು

by Kundapur Xpress
Spread the love

ಉಡುಪಿ: ಖಾಸಗಿ ಸಿಟಿ ಬಸ್ಸಿನಲ್ಲಿ ಮಣಿಪಾಲದಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದ, ಪ್ರಯಾಣಿಕನಿಗೆ, ಎಂ.ಜಿ.ಎಂ ಕಾಲೇಜು ಸನಿಹ ರಕ್ತವಾಂತಿ ಪ್ರಾರಂಭವಾಗಿ, ಆರೋಗ್ಯ ಸ್ಥಿತಿ ಗಂಭೀರಗೊಂಡಿತು. ತಕ್ಷಣ ಬಸ್ಸಿನ ಮಾಲಿಕ ಮಧುಸೂದನ್ ಶೆಟ್ಟಿ, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಿಗೆ ಮಾಹಿತಿ ನೀಡಿದರು.ಪ್ರಯಾಣಿಕನನ್ನು ಕುಂದಾಪುರದ ನಿವಾಸಿ ಸಂತೋಷ(45ವ) ಎಂದು ಗುರುತಿಸಲಾಗಿದೆ.

ಸಿಟಿ ಬಸ್ಸು ನಿಲ್ದಾಣದಡೆಗೆ ಅಂಬುಲೆನ್ಸ್ ವಾಹನದಲ್ಲಿ ಧಾವಿಸಿ ಬಂದ ಒಳಕಾಡುವರು, ಪ್ರಯಾಣಿಕನನ್ನು ಬಸ್ಸಿನ ನಿರ್ವಾಹಕ, ಹಾಗೂ ಸ್ಥಳದಲ್ಲಿದ್ದ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆದರೆ ವ್ಯಕ್ತಿ ಚಿಕಿಸ್ಥೆ ಫಲಕಾರಿ ಆಗದೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 

Related Articles

error: Content is protected !!