ಕುಂದಾಪುರ :ನಗರ ಸಮೀಪದ ಹಂಗಳೂರು ಅಂಕದಕಟ್ಟೆಯಲ್ಲಿ ಗೂಡ್ಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದು ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ನಸುಕಿನ ವೇಳೆ ರಾಷ್ಟ್ರಿಯ ಹೆದ್ದಾರಿ 66ರ ಕೋಟೇಶ್ವರದ ಸಹನಾ ಹಾಲ್ ಎದುರುಗಡೆ ನಡೆದಿದೆ.
ಮಂಗಳೂರಿನ MRPL ಘಟಕದಿಂದ ಪ್ಲಾಸ್ಟಿಕ್ ತಯಾರಿಕೆಗೆ ಬಳಸುವಕಚ್ಚಾ ವಸ್ತುವಾದ ಪ್ಲಾಸ್ಟಿಕ್ ಗ್ರಾನುವಲ್ಸ್ ತುಂಬಿಕೊಂದು ಸೋಲಾಪುರಕ್ಕೆ ಸಾಗುತ್ತಿತು ಪ್ಲಾಸ್ಟಿಕ್ ತಯಾರಿಸುವ ಕಚ್ಚಾ ವಸ್ತು ಸಾಗಿಸುತ್ತಿದ್ದ ಲಾರಿಯು ಹಂಗಳೂರಿನ ಸರ್ವಿಸ್ ರಸ್ತೆಯ ಮೇಲೆ ಬಿದ್ದಿರುವ ಕಾರಣ ಸಂಚಾರಕ್ಕೆ ಕೆಲ ಹೊತ್ತು ಅಡೆತಡೆ ಉಂಟಾಯಿತು ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲಾ. ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ