144
ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕಾರು ಚಾಲಕ ಸ್ಕೂಟಿಗೆ ಗುದ್ದಿ ಅರ್ಧ ಕಿ.ಮೀ. ಬೈಕ್ ಎಳೆದೊಯ್ದ ಘಟನೆ ಶಿವಮೊಗ್ಗ ನಗರದಲ್ಲಿ ರಾತ್ರಿ ನಡೆದಿದೆ.ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲದಿಂದ ಸವಳಂಗ ರಸ್ತೆವರೆಗೂ ಸ್ಕೂಟಿಯನ್ನು ಕಾರು ಎಳೆದೊಯ್ದಿದೆ. ಈ ವೇಳೆ ಸ್ಥಳೀಯರು ಕಾರನ್ನ ತಡೆದು ಕಾರು ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಅದೃಷ್ಟವಶಾತ್ ಸ್ಕೂಟಿ ಸವಾರ ಪಾರಾಗಿದ್ದು ಸ್ಕೂಟಿ ಸಂಪೂರ್ಣ ಜಖಂ ಗೊಂಡಿದೆ.
ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಕಾರು ಹಾಗೂ ಕಾರು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಕುಡಿದ್ದಿದ್ದ ಎಂದು ತಿಳಿದುಬಂದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

