Home » ಬನ್ಸ್‌ ರಾಘು ನಿಧನ
 

ಬನ್ಸ್‌ ರಾಘು ನಿಧನ

by Kundapur Xpress
Spread the love

ಕುಂದಾಪುರ : ಕುಂದಾಪುರದ ಖಾರ್ವಿಕೇರಿ ನಿವಾಸಿಯಾದ ರಾಘವೇಂದ್ರ ಶೇರಿಗಾರ್‌ ಯಾನೆ ಬನ್ಸ್‌ ರಾಘು ರವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 10.30 ಕ್ಕೆ ನಿಧನ ಹೊಂದಿದರು

ನಿನ್ನೆ ನಗರದ ಚಿಕ್ಕನ್‌ ಸಾಲ್‌ ರಸ್ತೆಯಲ್ಲಿ ರಾತ್ರಿ 7.00 ಗಂಟೆಯ ಸುಮಾರಿಗೆ ಇವರು ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿದ್ದರು

ತಕ್ಷಣ ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನ ಹೊಂದಿದರು ಕಾಂಗ್ರೇಸ್‌  ಕಾರ್ಯಕರ್ತರಾಗಿದ್ದ ಅವರಿಗೆ 42 ವರ್ಷ ವಯಸ್ಸಾಗಿತ್ತು

   

Related Articles

error: Content is protected !!