Home » ಕುಡಿದ ಮತ್ತಿನಲ್ಲಿ ಕಾರು ಚಾಲಕ : ನಾಲ್ಕು ವಾಹನಗಳಿಗೆ ಅಪಘಾತ
 

ಕುಡಿದ ಮತ್ತಿನಲ್ಲಿ ಕಾರು ಚಾಲಕ : ನಾಲ್ಕು ವಾಹನಗಳಿಗೆ ಅಪಘಾತ

by Kundapur Xpress
Spread the love

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಕಾರು ಚಾಲಕನೊಬ್ಬ ಯದ್ವ ತದ್ವ ಚಾಲನೆ ಮಾಡಿ ಬೈಕ್, ಆಟೋ, ಕಾರು ಸೇರಿ ನಾಲ್ಕು ವಾಹನಗಳಿಗೆ ಅಪಘಾತ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಮೂಲದ ಕುಮಾ‌ರ್ ಎಂಬಾತ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ್ದಾನೆ. ಈ ವೇಳೆ ನಾಲ್ಕು ವಾಹನಗಳಿಗೆ ಗುದ್ದಿದ್ದಾನೆ. ಕೊನೆಗೆ ತನ್ನ ಕಾರು ಡಿವೈಡರ್‌ಗೆ ಗುದ್ದಿ ಅಪಘಾತ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಮಹಾವೀರ ವೃತ್ತದಲ್ಲಿ ಘಟನೆ ನಡೆದಿದ್ದು ಗೋಪಿ ವೃತ್ತದಿಂದ ಮಹಾವೀರ ವೃತ್ತಕ್ಕೆ ಬರುವಷ್ಟರಲ್ಲಿ ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ.ಕುಡಿದ ಮತ್ತಿನಲ್ಲಿ ಯದ್ವ-ತದ್ವ ಕಾರು ಡ್ರೈವಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಕಾರು ಚಾಲಕ ಕುಮಾರನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

 

Related Articles

error: Content is protected !!