ಕುಂದಾಪ್ರ : ಹೊಯ್ ಅಂಬಲೆನ್ಸೇ…ಕೆದೂರಿಂದ ಮಾತಾಡ್ತಿದ್ನೆ ನಮ್ಮನಿ ಹೆಣ್ಣಿಗೆ ಜೋರ್ ಹೊಟ್ಟಿನೋವ್ ಮಾರ್ರೇ ಒಂಚೂರ್ ಬತ್ರ್ಯೇ….. ಕುಂದಾಪ್ರ ಆಸ್ಪತ್ರಿಗ್ ಸೇರ್ಸುಕ್ಕಿತ್ …..
ಇಂದು ಬೆಳಗ್ಗೆ 7 ಗಂಟೆ 56 ನಿಮಿಷಕ್ಕೆ ಕೋಟ ವಿಭಾಗದ ಅಂಬುಲೆನ್ಸ್‌ಗೆ ಬಂದ ಕರೆಯನ್ನು ಸ್ವೀಕರಿಸಿದ ಅಂಬುಲೆನ್ಸ್ ಪೈಲಟ್ ಗೀರೀಶ್ ಎಂಬವರು ಕೆದೂರಿಗೆ ತೆರಳಿ ಗರ್ಭಿಣಿಯನ್ನು ಕುಂದಾಪುರದ ಸರಕಾರಿ ಅಸ್ಪತ್ರೆಗೆ ದಾಖಲಿಸಲು ಕರೆ ತರುತ್ತಿದ್ದಾಗ ತೆಕ್ಕಟ್ಟೆ ಬಳಿಯ ಮಲ್ಯಾಡಿಯಲ್ಲಿ ಅಂಬುಲೆನ್ಸನಲ್ಲೇ ಹೇರಿಗೆಯನ್ನು ಮಾಡಿಸಲಾಯಿತು
ಕೆದೂರಿನ ನಿವಾಸಿ ಪ್ರೀಯಾ (24ವರ್ಷ) ಎಂಬವರು ಅತೀಯಾದ ಹೊಟ್ಟೆನೋವಿನಿಂದ ಅಂಬಲೆನ್ಸನಲ್ಲಿ ಕುಂದಾಪುರದ ಸರಕಾರಿ ಅಸ್ಪತ್ರೆಗೆ ಬರುತ್ತಿರುವಾಗ ದಾರಿ ಮಧ್ಯೆ ಮಲ್ಯಾಡಿ ಎಂಬಲ್ಲಿ 8 ಗಂಟೆ 45 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮವಿತ್ತರು
ಅಂಬುಲೆನ್ಸ್ ಸುಶ್ರೂಷಕಿ ಜೇನಿ ಲೆವಿಸ್ ಎಂಬವರು ಯಶಸ್ವಿಯಾಗಿ ಹೇರಿಗೆ ಮಾಡಿಸಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದ್ದು ಇಬ್ಬರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ