ಮಣಿಪಾಲ : ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆ ಮೇಲೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ

by Kundapur Xpress
Spread the love

ಮಣಿಪಾಲ : ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆ ಮೇಲೆ ಪೊಲೀಸರ ದಾಳಿ : 6 ಮಂದಿ ವಶಕ್ಕೆ

ಮಣಿಪಾಲ: ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಕೆಳ ಶಾಂತಿನಗರದ ಸಾರ್ವಜನಿಕ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಡ್ಡೆ ಮೇಲೆ ಮಣಿಪಾಲ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ದಿನಾಂಕ 16-09-2026 ರಂದು ಮಣಿಪಾಲ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿವೇಕಾನಂದ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಲಾಗಿದೆ.

ಸಾರ್ವಜನಿಕ ಹಾಡಿಯ ಮಧ್ಯದಲ್ಲಿ 6 ಜನ ಗಂಡಸರು ಕುಳಿತು ಹಣವನ್ನು ಪಣವನ್ನಾಗಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದರು.

ವಶಕ್ಕೆ ಪಡೆದ ಆರೋಪಿಗಳು ಲಕ್ಷ್ಮಣ್ ಚಂದ್ರಪ್ಪ ಚೌದರಿ (43) ಬಾಗಲಕೋಟೆ ಜಿಲ್ಲೆ ,ಶಂಕರ ಗೌಡ ಹೊಸಮನೆ ಬಿಜಾಪುರ ಜಿಲ್ಲೆ,
ಸುರೇಶ್ (32), ಬಾಗಲಕೋಟೆ ಜಿಲ್ಲೆ,ದಾನಪ್ಪ ರಾಠೋಡ್ (35), ಬಾಗಲಕೋಟೆ ಜಿಲ್ಲೆ,ಯಮುನಪ್ಪ ನಾಗರಾಳ (40), ಬಾಗಲಕೋಟೆ ಜಿಲ್ಲೆ, ಬರಮಪ್ಪ (51), ಬಾಗಲಕೋಟೆ ಜಿಲ್ಲೆ ಎಂದು ತಿಳಿಯಲಾಗಿದೆ.

ಆರೋಪಿಗಳಿಂದ ಜುಗಾರಿಗೆ ಬಳಸಿದ್ದ ಬಿಳಿ ಪ್ಲಾಸ್ಟಿಕ್ ಚೀಲ, ಪಣಕ್ಕೆ ಇಟ್ಟಿದ್ದ ರೂ. 8,830 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2026 ಕಲಂ 87 KP Act ರಂತೆ ಪ್ರಕರಣ ದಾಖಲಾಗಿದೆ.

 

Related Articles

error: Content is protected !!