ಬಿ. ಬಿ. ಹೆಗ್ಡೆ ಕಾಲೇಜು: “ನೋವೆಷನ್" – ಮ್ಯಾನೇಜ್ಮೆಂಟ್ ಫೆಸ್ಟ್- ಉದ್ಘಾಟನೆ

by Kundapur Xpress
Spread the love

ಬಿ. ಬಿ. ಹೆಗ್ಡೆ ಕಾಲೇಜು: “ನೋವೆಷನ್” – ಮ್ಯಾನೇಜ್ಮೆಂಟ್ ಫೆಸ್ಟ್- ಉದ್ಘಾಟನೆ

ಕುಂದಾಪುರ : ಇಲ್ಲಿನ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ಸೆಪ್ಟೆಂಬರ್ 11ಹಾಗೂ 12 ರಂದು ನಡೆಯಲಿರುವ “ನೋವೆಷನ್” ಕಾರ್ಪೊರೇಟ್ ಬ್ಯಾಟಲ್ ಮ್ಯಾನೇಜ್ಮೆಂಟ್ ಫೆಸ್ಟ್ ಇಂಟರ್ ಕಂಪನಿ ಸ್ಪರ್ಧೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಸೆಪ್ಟೆಂಬರ್ 10 ರಂದು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಆಡಳಿತ ನಿಕಾಯಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶೈಕ್ಷಣಿಕ ನಿಕಾಯಕರಾದ ಶ್ರೀ ತಿಮ್ಮಪ್ಪ ಡಿ.ಎಸ್.‌, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ, ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಕಾರ್ಯಕ್ರಮ ಸಂಯೋಜಕರಾದ ಶ್ರೀ ಹರೀಶ್ ಬಿ., ಶ್ರೀಮತಿ ಅವಿತಾ ಕೊರೆಯಾ, ವಿಭಾಗದ ಪ್ರಾಧ್ಯಾಪಕರುಗಳಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ, ಶ್ರೀ ರಜತ್ ಬಂಗೇರ, ಶ್ರೀ ರವಿನಂದನ್ ಭಟ್ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರುಗಳು, ವಿದ್ಯಾರ್ಥಿ ಪ್ರತಿನಿಧಿಗಳಾದ ರಾಕೇಶ್ ಹಾಗೂ ರಾಜೇಶ್ವರಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಆಕರ್ಷಕ ಫ್ಲಾಶ್ ಮೊಬ್ ನಡೆಯಿತು. ವಿದ್ಯಾರ್ಥಿಗಳಾದ ಪ್ರತೀಕ್ಷಾ ಹಾಗೂ ರೋನಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!