Home » ಕಂಪೌಂಡ್‌ ಒಳಗೆ ಇಟ್ಟಿರುವ ಬೈಕ್  ಕಳವು
 

ಕಂಪೌಂಡ್‌ ಒಳಗೆ ಇಟ್ಟಿರುವ ಬೈಕ್  ಕಳವು

by Kundapur Xpress
Spread the love

ಬೈಂದೂರು:ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಕೆ. ಅಬ್ದುಲ್ ಖಾದರ್ ಎಂಬವರ ಮನೆಯ ಕಂಪೌಂಡ್‌ ಒಳಗೆ ಇಟ್ಟಿರುವ ಬೈಕ್  ಕಳವು ಆಗಿರುವ ಘಟನೆ ನಡೆದಿದೆ.

ಕೆ. ಅಬ್ದುಲ್‌ ಖಾದರ್‌ (61),ಯಡ್ತರೆ ಗ್ರಾಮ ಬೈಂದೂರು ಇವರು ಟಿವಿಎಸ್‌ ರೆಡಾನ್‌ ಕಂಪನಿಯ ಮೋಟಾರ ಸೈಕಲ್‌ ಅದರ ಕೀ ಸಮೇತ ಮನೆಯ ಕಂಪೌಂಡ್‌ ಒಳಗೆ ಇಟ್ಟಿರುವುದನ್ನು ಯಾರೋ ಕಿಡಿಗೇಡಿಗಳು ಮೋಟಾರ ಸೈಕಲ್‌ನ್ನು ತೆಗೆದುಕೊಂಡು ಹೋಗಿದ್ದು ಹುಡುಕಾಡಿದಾಗ ಬೈಂದೂರು ರೈಲ್ವೆ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸಿಕ್ಕಿರುತ್ತದೆ. ನಂತರ ಮನೆಯ ಕಾಂಪೌಂಡ್‌ನಲ್ಲಿ ಮೋಟರ್‌ ಸೈಕಲ್‌ ನ್ನು ಇಟಿದ್ದು ನೋಡುವಾಗ ಮೋಟರ ಸೈಕಲ್‌ ಇಟ್ಟ ಸ್ಥಳದಲ್ಲಿ ಇರುವುದಿಲ್ಲ ಯಾರೋ ಕಳ್ಳರು ಮೋಟಾರ ಸೈಕಲ್‌ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!