ಕುಂದಾಪುರ: ಬಿದ್ಕಲ್‌ಕಟ್ಟೆ ಸಮೀಪದ ಸೌಡದ ವಾರಾಹಿ ನದಿಯಲ್ಲಿ ಈಜಾಡಲು ತೆರಳಿ ನಾಪತ್ತೆಯಾದ ಯುವಕನ ಮೃತದೇಹ ಇಂದು ಬೆಳಿಗ್ಗೆ 8.00 ಗಂಟೆಗೆ ಪತ್ತೆಯಾಗಿದೆ
ಸುಳ್ಯ ತಾಲೋಕಿನ ಐವರ್ನಾಡು ಗಾಮದ ಮೀರನಾಥ್ ರವರ ಮಗ 21 ವರ್ಷದ ಸುಹಾಸ್ ನಿನ್ನೆ ನದಿಯಲ್ಲಿ ನಾಪತ್ತೆಯಾಗಿದ್ದು ಇಂದು ಬೆಳಿಗ್ಗೆ ನದಿಯಿಂದ ಮೇಲಕ್ಕೆತ್ತಲಾಯಿತು
ಸುಳ್ಯದ ನಿವಾಸಿಯಾದ ಸುಹಾಸ್ ಮೂಡುಬಿದಿರೆಯ ಆಯುರ್ವೇದ ಔಷಧ ಕಂಪೆನಿಯಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಸಂಬಂಧಿಕರ ಗೃಹ ಪ್ರವೇಶಕ್ಕಾಗಿ ಸೌಡಕ್ಕೆ ಆಗಮಿಸಿದ್ದರು ಅಲ್ಲಿಯ ವಾರಾಹಿ ನದಿಗೆ ಈಜಲು ತೆರಳಿ ಅಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಹೋಗಿದ್ದು