Home » ಬಾವಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂವರು : ಅಗ್ನಿ ಶಾಮಕ ದಳದವರಿಂದ ರಕ್ಷಣೆ
 

ಬಾವಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂವರು : ಅಗ್ನಿ ಶಾಮಕ ದಳದವರಿಂದ ರಕ್ಷಣೆ

by Kundapur Xpress
Spread the love

ಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಬಾವಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂವರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಮೇ 10ರಂದು ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ.

ರಾಜೇಶ್‌ (42), ಪವನ್‌ (29) ಹಾಗೂ ಗೋಪಾಲ್‌ ನಾಯ್ಕ್‌ (52) ಎಂಬವರು ಬಾವಿಯ ಮಣ್ಣು ತೆಗೆಯಲೆಂದು ಬಾವಿಗಿಳಿದಿದ್ದು, ರಾಜೇಶ್‌ ಎಂಬವರು ಮೇಲಕ್ಕೆ ಬರುವಾಗ ಬಿದ್ದು ಗಾಯಗೊಂಡಿದ್ದರು. ಇವರನ್ನು ರಕ್ಷಿಸಲು ಮುಂದಾದ ಪವನ್‌ ಹಾಗೂ ಗೋಪಾಲ್‌ ನಾಯ್ಕ್‌ ಕೂಡ ಬಾವಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಮೂವರನ್ನು ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿದ್ದ ರಾಜೇಶ್‌ ಅವರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆ ಸಾಗಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್‌, ಸಿಬ್ಬಂದಿ ರೂಪೇಶ್‌, ಸುರೇಶ, ಮುಜಾಮಿಲ್‌, ದಿನೇಶ್‌, ಗಣೇಶ್‌, ನಿತ್ಯಾನಂದ ಭಾಗವಹಿಸಿದ್ದರು.

 

Related Articles

error: Content is protected !!