324
ನವದೆಹಲಿ : ಒಡಿಸ್ಸಾದ ಬಾಲಸೋರ್ ನಲ್ಲಿ ನಡೆದ ರೈಲ್ವೆ ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಮೂವರನ್ನು ಬಂಧಿಸಿದೆ
ಜೂನ್ 2 ರಂದು ಒಡಿಸ್ಸಾದ ಬಾಲಸೋರ್ ನಲ್ಲಿ ಮೂರು ರೈಲುಗಳ ಸರಣಿ ಅಪಘಾತದಿಂದ 291 ಪ್ರಯಾಣಿಕರು ಅಸುನೀಗಿದ್ದು 1000 ಕ್ಕೂ ಮಿಕ್ಕಿ ಪ್ರಯಾಣಿಕರು ಗಾಯಗೊಂಡಿದ್ದರು ಈ ಅಪಘಾತದಲ್ಲಿ ಮೇಲ್ನೋಟಕ್ಕೆ ಒಳಸಂಚು ಹಾಗೂ ಪಿತೂರಿ ಕಂಡು ಬಂದಿದ್ದರಿಂದ ಈ ಪ್ರಕರಣವನ್ನುಸಿಬಿಐ ಗೆ ವಹಿಸಲಾಗಿತ್ತು
ತನಿಖೆ ನಡೆಸಿದ ಕೇಂದ್ರೀಯ ತನಿಖಾ ದಳವು ರೈಲ್ವೆ ನೌಕರರಾದ ಸೀನಿಯರ್ ಸೆಕ್ಷನ್ ಇಂಜೀನಿಯರ್ ಅರುಣ್ ಕುಮಾರ್ ಮೊಹಂತಾ ಸೆಕ್ಷನ್ ಇಂಜೀನಿಯರ್ ಮೊಹಮ್ಮದ್ ಅಮೀರ್ ಖಾನ್ ಹಾಗೂ ಟೆಕ್ನಿಶಿಯನ್ ಪಪ್ಪು ಕುಮಾರ್ ರವರನ್ನು ಸಿಆರ್‌ಪಿಸಿ ಸೆಕ್ಷನ್ 304 ಮತ್ತು 201 ರ ಅಡಿಯಲ್ಲಿ ಬಂಧಿಸಲಾಗಿದ್ದು ತನಿಖೆ ನಡೆಸುತ್ತಿದ್ದಾರೆ

