Home » ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಕೆ
 

ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಕೆ

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

by Kundapur Xpress
Spread the love

ಬ್ರಹ್ಮಾವರ: ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಫೆ 14 ರಂದು ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಕಾರ್ಯಕ್ರಮದ ಸಂಘಟಕರಾದ ಜನಸೇವಾ ಟ್ರಸ್ಟ್(ರಿ) ಗಿಳಿಯಾರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ರಸ್ತೆ, ಕುಂಭಾಶಿ ಉಡುಪಿ ರವರಿಗೆ ಅಭಿಮತ ಸಂಭ್ರಮ ಕಾರ್ಯಕ್ರಮ ನಡೆಸಲು ದಿನಾಂಕ 14/02/2026 ರಂದು ಸಂಜೆ 06:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವಂತೆ ಷರತ್ತನ್ನು ವಿಧಿಸಿದ್ದರು

ಆದರೂ ಕೂಡ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿಮೀರಿ ಧ್ವನಿವರ್ಧಕವನ್ನು ಬಳಸಿ ಪರವಾನಗಿಯಲ್ಲಿ ವಿಧಿಸಿದ ಷರತ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ವ್ಯತಿರಿಕ್ತವಾಗಿ ನಡೆದುಕೊಂಡು, ಕಾನೂನು ಉಲ್ಲಂಘಿಸಿರುವ ಆಪಾದಿತರಾದ ಸದ್ರಿ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ವರದಿಯನ್ನು ದಿನಾಂಕ 15.02.2026 ರಂದು ಠಾಣಾ NC NO 87/PTN/BVR/2026 ರಂತೆ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ .ಈ ಬಗ್ಗೆ ಅಶೋಕ್‌ ಮಾಳಬಾಗಿ ಪೊಲೀಸ್‌ ಉಪನಿರೀಕ್ಷಕರು ಬ್ರಹ್ಮಾವರ ಪೊಲೀಸ್‌ ಠಾಣೆ ರವರು ದೂರು ನೀಡಿದ್ದು ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 32/2026 ಕಲಂ: 292 BNS-2023 ಮತ್ತು ಕಲಂ: 109 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!