Home » ಕೋಟ : ಇಸ್ಪೀಟು ಜುಜಾಟ ಪೋಲೀಸರಿಂದ ದಾಳಿ
 

ಕೋಟ : ಇಸ್ಪೀಟು ಜುಜಾಟ ಪೋಲೀಸರಿಂದ ದಾಳಿ

by Kundapur Xpress
Spread the love

ಕೋಟ: ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿ ಜೂನ್ 7 ರಂದು ಅಕ್ರಮವಾಗಿ ಇಸ್ಪೀಟು ಜುಗಾರಿ ಆಡುತ್ತಿದ್ದ ಅಡ್ಡೆಗೆ ಕೋಟ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾ‌ರ್ ಆರ್. ಮತ್ತು ತಂಡದವರು ದಾಳಿ ನಡೆಸಿದ್ದಾರೆ. ಇಲ್ಲಿನ ಭಾಸ್ಕರ ಶೆಟ್ಟಿ ಎಂಬುವವರ ಮನೆಯ ಎದುರಿನ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ‘ಅಂದ‌ರ್-ಬಾಹ‌ರ್’ ಆಟವಾಡುತ್ತಿದ್ದ ಕುಂದಾಪುರ ತಾಲೂಕಿನ ಚಂದ್ರ ಮೊಗವೀರ (43), ಉಮೇಶ (33), ಕೃಷ್ಣ (27), ರಘುರಾಮ ಶೆಟ್ಟಿ (49), ರಾಜು (39) ಹಾಗೂ ಶಂಕರನಾರಾಯಣದ ಆನಂದ (56) ಎಂಬ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಜುಗಾರಿ ಆಟಕ್ಕೆ ಬಳಸಿದ್ದ 7,900 ರೂಪಾಯಿ ನಗದು ಹಣ, ಇಸ್ಪೀಟು ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್‌ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್‌ ಠಾಣೆಯಲ್ಲಿ 95/2026 ៩០: 87 KP ACT ರಡಿಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!