ಕುಂದಾಪುರ : ಕುಂದಾಪುರ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತೆ ಹಾಗೂ ರಾಷ್ಟ್ರಸೇವಿಕಾ ಸಮಿತಿಯ ಜಿಲ್ಲಾ ಕಾರ್ಯವಾಹಿಕರಾದ ಶ್ರೀಮತಿ ಪ್ರೇಮ ಚಂದ್ರಶೇಖರ್ ಪಡಿಯಾರ್ ಇವರು ಇಂದು ಬೆಳಿಗ್ಗೆ ತೀವ್ರ ಹೃದಯಘಾತದಿಂದ ನಿಧನ ಹೊಂದಿದರು ಅವರಿಗೆ 62 ವರ್ಷ ವಯಸ್ಸಾಗಿತ್ತು ಕಳೆದ ಹಲವಾರು ವರ್ಷಗಳಿಂದ ಸಂಘ ಪರಿವಾರದ ಕಾರ್ಯಕರ್ತೆಯಾದ ಇವರು ಪ್ರೇಮಕ್ಕ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು ಅವರು ಸೇವಾ ಸಂಗಮದ ಕುಂದಾಪುರ ಇದರ ಟ್ರಸ್ಟಿಯಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು
ತನ್ನ ಅನಾರೋಗ್ಯದ ನಿಮಿತ್ತ ಅವರು ಚಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದು ಅಲ್ಲಿ ಇಂದು ಬೆಳಿಗ್ಗೆ 9.30 ರ ಸುಮಾರಿಗೆ ತೀವ್ರ ಹೃದಯಘಾತದಿಂದ ನಿಧನ ಹೊಂದಿದರು ಅವರು ಪತಿ ಹಾಗೂ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಮತ್ತು ಸಂಘ ಪರಿವಾರದ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ ಅವರ ಅಂತ್ಯಕ್ರಿಯೆಯು ನಾಳೆ ಡಿಸೆಂಬರ್ 24ರ ಆದಿತ್ಯವಾರ ಬೆಳಗ್ಗೆ 8.00 ಗಂಟೆಗೆ ರಾಮಮಂದಿರ ರಸ್ತೆಯ ರಾಘವೇಂದ್ರ ಮಠದ ಎದುರುಗಡೆಯಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಲಿದೆ