ಕುಂದಾಪುರ :ಸಾಲಿಗ್ರಾಮ ನಿವಾಸಿಯಾದ ರಘುರಾಮ್ ಭಂಡಾರಿ(64ವರ್ಷ)ಎಂಬುವವರು ಹೃದಯಾಘಾತಯಿಂದ ನಿಧನ ಹೊಂದಿದರು ಎಂದು ತಿಳಿದುಬಂದಿದೆ.ರಘುರಾಮ್ ಭಂಡಾರಿ ಅವರಿಗೆ ತನ್ನ ಸ್ವಗೃಹದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಅವರ ಪುತ್ರರಾದ ವಿಜಯ ಎಂಬವರು ತನ್ನ ಕಾರಿನಲ್ಲಿ ಕೋಟೇಶ್ವರದ ಡಾಕ್ಟರ್ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಘುರಾಮ್ ಭಂಡಾರಿ ಅವರು ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ ಶ್ರೀಯುತರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವ್ರತ್ತರಾಗಿದ್ದರು. ರಘುರಾಮ್ ಭಂಡಾರಿಯವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ