Home » ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿ ಬಂಧನ
 

ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿ ಬಂಧನ

by Kundapur Xpress
Spread the love

ಉಪ್ಪಿನಂಗಡಿ: ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ರಜಾಕ್  ಬಂಧಿತ ಆರೋಪಿ.ಪೊಲೀಸ್‌ ಉಪನಿರೀಕ್ಷಕರಾದ ಅವಿನಾಶ್ ಹೆಚ್ ರವರು ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ವಾಹನ ತಪಾಸಣೆ ಮಾಡುವ ಸಮಯನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಪ್ಪು ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದಾಗ ಅದರ ಚಾಲಕ ನಿಲ್ಲಿಸದೇ ದೂರದಲ್ಲಿ ನಿಲ್ಲಿಸಿ ಚಾಲಕ ಇಳಿದು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆಕೂಡಲೇ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್‌ ಮತ್ತು ಸಿಬ್ಬಂದಿ ಓಡಿಹೋಗಿ ಚಾಲಕನನ್ನು ಹಿಡಿದುಕೊಂಡು ವಿಚಾರಿಸಿದಾಗ ಸರಿಯಾಗಿ ಉತ್ತರವನ್ನು ಹೇಳದೆ ಅಸ್ಪಷ್ಟವಾಗಿ, ತೊದಲುತ್ತಾ ಅಮಲು ಪದಾರ್ಥ ಅಥವಾ ಮಾದಕ ವಸ್ತುವನ್ನು ಸೇವನೆ ಮಾಡಿರುವಂತೆ ಮಾತನಾಡುತ್ತಿರುವುದು ಕಂಡು ಆತನ ಬಗ್ಗೆ ಅನುಮಾನಗೊಂಡು ಅವನ ಹೆಸರು ವಿಳಾಸವನ್ನು ಕೇಳಿದ್ದಾರೆ. ಆಗ ಆತ ತಾನು ರಜಾಕ್ ಉಪ್ಪಿನಂಗಡಿಯ ಮಠ ನಿವಾಸಿ ಎಂದಿದ್ದಾನೆ

 

Related Articles

error: Content is protected !!