Home » ಅಕ್ರಮ ಜುಗಾರಿ ಅಡ್ಡೆಯ ಮೇಲೆ ಪೊಲೀಸರ ದಾಳಿ :12 ಮಂದಿ ಬಂಧನ
 

ಅಕ್ರಮ ಜುಗಾರಿ ಅಡ್ಡೆಯ ಮೇಲೆ ಪೊಲೀಸರ ದಾಳಿ :12 ಮಂದಿ ಬಂಧನ

by Kundapur Xpress
Spread the love

ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಯ ಮೇಲೆ ನಗರ ಠಾಣಾ ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ್ದಾರೆ.

ಶ್ರೀನಿವಾಸ (31) ನಿಟ್ಟೂರು, ಕಾರ್ತಿಕ್ (33) ಜಾತಬೆಟ್ಟು, ಉಪೂರು, ಸುಧಾಕರ್ ಮೊಗವೀರ (45), ಕೊಳಲಗಿರಿ, ಉಳ್ಳೂರು, ಸುಧೀರ್ (40) ಹನುಮಂತನಗರ, ಸಂತೋಷ್ ಮೊಗವೀರ (40) ಸಂತೆಕಟ್ಟೆ, ಹೆಬ್ರಿ, ಸಂತೋಷ್ ಪೂಜಾರಿ (36) ಕುಂಜಾಲು, ಹಿಮರಾಜ್ (36) ಕೆಮ್ಮಣ್ಣು ಬ್ರಿಡ್ಜ್ ಹತ್ತಿರ, ನಿಡಂಬಳ್ಳಿ, ರಾಜೇಶ್ (42) ಉಪೂರು, ಹಾವಂಜೆ, ಹರ್ಷಿತ್ (30) ಅಡ್ಡ ಬೆಂಗ್ರೆ, ಕೆಮ್ಮಣ್ಣು, ರವಿರಾಜ್ ಕುಂದರ್ (44) ಹೂಡೆ, ಆದರ್ಶ್ (34) ಗಿಳಿಯಾರ್ ಗ್ರಾಮ, ಕೋಟ, ಪ್ರದೀಪ್ ಶೆಟ್ಟಿ (33)ಗಿಳಿಯಾರ್ ಗ್ರಾಮ, ಕೋಟ ಬಂಧಿತರು ಎಂದು ಗುರುತಿಸಲಾಗಿದೆ.

ಏಪ್ರಿಲ್ 7ರಂದು ರಾತ್ರಿ ಪುತ್ತೂರಿನ ಗೋಪಾಲಪುರದ ಕ್ಲಾಸಿಕ್ ನೋವಾ ಕಟ್ಟಡದ 2ನೇ ಮಹಡಿಯ ರೂಂ ನಂ.111ರಲ್ಲಿ ಕೆಲವರು ಗುಂಪು ಸೇರಿ ಹಣ ಪಣವಾಗಿಟ್ಟು ‘ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯಂತೆ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರು, ಮೇಲಧಿಕಾರಿಗಳ ಅನುಮತಿ ಪಡೆದು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ದಾಳಿಯ ವೇಳೆ ಜುಗಾರಿ ಆಡುತ್ತಿದ್ದ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಒಟ್ಟು ₹42,300 ನಗದು, ಸುಮಾರು ₹73,000 ಮೌಲ್ಯದ 11 ಮೊಬೈಲ್‌ಗಳು, ₹1,20,000 ಮೌಲ್ಯದ ಎರಡು ಮೋಟಾರ್ ಸೈಕಲ್‌ಗಳು, ಕಬ್ಬಿಣದ ಟೇಬಲ್, ಪ್ಲಾಸ್ಟಿಕ್ ಕುರ್ಚಿಗಳು, ಟೇಬಲ್ ಬಟ್ಟೆ ಹಾಗೂ 3 ಸೆಟ್ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 49/2026 ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79 ಮತ್ತು 80ರಂತೆ ಪ್ರಕರಣ ದಾಖಲಾಗಿದೆ.ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

 

Related Articles

error: Content is protected !!