Home » ಮಾದಕ ವಸ್ತು ಸಾಗಾಟ : ಮೂವರು ಆರೋಪಿಗಳ ಬಂಧನ
 

ಮಾದಕ ವಸ್ತು ಸಾಗಾಟ : ಮೂವರು ಆರೋಪಿಗಳ ಬಂಧನ

by Kundapur Xpress
Spread the love

ಬಂಟ್ವಾಳ : ಕಾರಿನಲ್ಲಿ ಎಂ.ಡಿ.ಎಂ.ಎ. ಮಾದಕದ್ರವ್ಯ ಸಾಗಣೆ ಮಾಡಿ ಮಾರಾಟ ಮಾಡಲು ಉದ್ದೇಶಿಸಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಪುದು ನಿವಾಸಿ ಎ.ಜುಬೈರ್, ಸಜೀಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್, ಹಾಗೂ ಬಂಟ್ವಾಳ ಬಿ.ಮೂಡ ನಿವಾಸಿ ಬಿ.ಎಂ.ರಶೀದ್ ಯಾನೆ ಮಾರಿಮುತ್ತು ಅವರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆ ಉಪನಿರೀಕ್ಷಕ ಸಂದೀಪ್ ಕುಮಾ‌ರ್ ಶೆಟ್ಟಿ ತಂಡ ಮೆಲ್ಕಾರ್‌ಫೈ ಓವರ್ ಬಳಿ ಬಂಧಿಸಿದೆ. ಅಂದಾಜು 7.64 ಲಕ್ಷ ರೂ. ಮೌಲ್ಯದ ಮಾದಕವಸ್ತು, ಕಾರನ್ನು ವಶಕ್ಕೆ ಪಡೆದಿದೆ.

ವಿಚಾರಣೆ ವೇಳೆ ಆರೋಪಿಗಳು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಿ. ಮೂಡ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲ್ಪಟ್ಟಿದ್ದಾರೆ.

ತಪಾಸಣೆಯ ವೇಳೆ ಆರೋಪಿಗಳ ಬಳಿಯಿಂದ ಹಾಗೂ ಕಾರಿನೊಳಗಿಂದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7.64 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹೆಚ್ಚಿನ ಲಾಭಕ್ಕಾಗಿ ಮಾದಕ ವಸ್ತುವನ್ನು ಮಾರಾಟ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಡಿಎಂಎ, ಮಾದಕ ವಸ್ತು ಸೇವನೆಗೆ ಬಳಸುವ ಸಾಧನ, ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕೆಎ-19 ಎಂಆರ್-1997 ಸಂಖ್ಯೆಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

Related Articles

error: Content is protected !!