75
ಉಡುಪಿ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳನ್ನು ನಾಶಗೊಳಿಸಲಾಯಿತು ಒಟ್ಟು 9 ಕೆಜಿ 937 ಗ್ರಾಂ 209 ಮಿಲಿಗ್ರಾಂ ಗಾಂಜಾ, ಅಂದಾಜು ಮೌಲ್ಯ ರೂ. 7 ಲಕ್ಷ 12 ಸಾವಿರ 963, ಹಾಗೂ 345 ಗ್ರಾಂ 596 ಮಿಲಿಗ್ರಾಂ ಎಂ.ಡಿ.ಎಂ.ಎ., ಅಂದಾಜು ಮೌಲ್ಯ ರೂ. 8 ಲಕ್ಷ 8 ಸಾವಿರ 464, ಮತ್ತು 61 ಗ್ರಾಂ 430 ಮಿಲಿಗ್ರಾಂ ಮೌಲ್ಯರಹಿತ ಬಿಳಿ ಪೌಡರ್ ಸೇರಿ, ಒಟ್ಟು ರೂ. 15 ಲಕ್ಷ 21 ಸಾವಿರ 427 ಮೌಲ್ಯದ ಮಾದಕ ದ್ರವ್ಯವನ್ನು ಪಡುಬಿದ್ರಿಯ ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ. ಲಿ.ಯಲ್ಲಿ ನಾಶಪಡಿಸಲಾಯಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ ಐಪಿಎಸ್, ಮತ್ತು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಪ್ರಭು ಡಿ.ಟಿ. ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ ಪೊಲೀಸರ ಈ ಕ್ರಮವು ಜಿಲ್ಲೆಯಲ್ಲಿ ಮಾದಕ ವಸ್ತು ನಿಯಂತ್ರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

