102
ಮಣಿಪಾಲ : ಸ್ವರ್ಣ ನದಿ ಹರಿಯುವ ಶೀಂಬ್ರ ಸೇತುವೆ ಅಡಿಯಲ್ಲಿ 65 ವರ್ಷದ ಗಂಡಸಿನ ಮೃತದೇಹ ಪತ್ತೆಯಾಗಿದೆ.ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಶವ ತೆರವುಗೊಳಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದಾರೆ.
ಯಾವುದೇ ಆರಕ್ಷಕ ಠಾಣೆಗಳಲ್ಲಿ ಗಂಡಸು ನಾಪತ್ತೆ ಪ್ರಕರಣಗಳು ದಾಖಲಾಗಿದ್ದಲ್ಲಿ ಮಣಿಪಾಲ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08202570328 ಕ್ಕೆ ಸಂಪರ್ಕಿಸಲು ಸೂಚಿಸಲಾಗಿದೆ.

