ಅಂತೂ…. ಬೋನಿಗೆ ಬಿದ್ದ ಚಿರತೆ
ಕುಂದಾಪುರ: ತೆಕ್ಕಟ್ಟೆ ಬಳಿಯ ಮಲ್ಯಾಡಿಯ ಆಸುಪಾಸಿನಲ್ಲಿ ಹಲವು ದಿನಗಳಿಂದ ಚಿರತೆ ತಿರುಗಾಡುತ್ತಿರುವ ಸುಳಿವು ಸಿಕ್ಕಿದ್ದು ಸಾರ್ವಜನಿಕರ ಮನದಲ್ಲಿ ಮನೆಮಾಡಿದ ಆತಂಕ ಇಂದಿಗೆ ಕೊನೆಗೊಂಡು ಜನರು ನಿಟ್ಟಿಸಿರು ಬಿಡುವಂತಾಗಿದೆ ತೆಕ್ಕಟ್ಟೆ ಗ್ರಮ ಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಬಳಿಯ ಶ್ರಿ ನಂದಿಕೇಶ್ವರ ದೇವಸ್ಥಾನದ ಹಾಗೂ ಅಂಗನವಾಡಿ ಶಾಲೆಯ ತೋಪಿನಲ್ಲಿ ಅರಣ್ಯ ಇಲಾಖೆಯು ಇಟ್ಟ ಬೋನಿನಲ್ಲಿ ಇಂದು ಬೆಳಗ್ಗಿನ ಜಾವ ಚಿರತೆ ಸೆರೆಯಾಗಿದೆ
ಈ ಚಿರತೆಗೆ 4 ರಿಂದ 5 ವರ್ಷ ಪ್ರಾಯವಾಗಿದ್ದುಅನೇಕ ದಿನಗಳಿಂದ ನಾಯಿ ಜಾನುವರು ಹಾಗೂ ಸಾಕು ಪ್ರಾಣಿಗಳನ್ನು ಹೊತ್ತೊಯ್ದಿದೆ ಇದೀಗ ಚಿರತೆ ಸೆರೆಯಾದ್ದರಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಪರಿಸರದವರ ಆತಂಕ ದೂರವಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ
ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್‌ಬಾಬು ಉಪವಲಯ ಅರಣ್ಯಾಧಿಕಾರಿ ಉದಯ್ ಸ್ಥಳೀಯ ಪ್ರಮುಖರಾದ ಮಲ್ಯಾಡಿ ಶಿವರಾಮ್ ಶೆಟ್ಟಿ ಸುರೇಶ್ ದೇವಾಡಿಗ ಸತೀಶ್ ದೇವಾಡಿಗ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ ಮುಂತಾದವರು ಸೇರಿದ್ದರು