Home » 70 ಲಕ್ಷ ವಂಚನೆ : ಪತ್ರಕರ್ತನ ಬಂಧನ
 

70 ಲಕ್ಷ ವಂಚನೆ : ಪತ್ರಕರ್ತನ ಬಂಧನ

by Kundapur Xpress
Spread the love

ಕುಂದಾಪುರ : ನ್ಯಾಯಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕುಂದಾಪುರದ ನಿವಾಸಿಯಾದ ಪತ್ರಕರ್ತ ದಯಾನಂದ ಎಂಬಾತ ಹಲವು ಜನರಿಗೆ ಒಟ್ಟು 70.25 ಲಕ್ಷ ರೂ. ವಂಚಿಸಿದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೀಪಕ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

ಪತ್ರಕರ್ತ ದಯಾನಂದ ಎಂಬಾತ ಉಡುಪಿ ನ್ಯಾಯಾಲಯದಲ್ಲಿ ʼ ಡಿ ʼ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕರೆದಿದ್ದು ಉದ್ಯೋಗ ಕೊಡಿಸುವುದಾಗಿ ನಂಬಿಸಿ  2022 ಜೂ.10 ರಂದು 6.5 ಲಕ್ಷ ರೂಪಾಯಿ ನಗದು ಹಣ ಪಡೆದುಕೊಂಡಿದ್ದಾನೆ. 2022ರ ಜೂ.16 ರಂದು ಮತ್ತೆ 3.00 ಲಕ್ಷ ರೂ. ಹಣವನ್ನು ಎಚ್ಡಿಎಫ್‌ಸಿ. ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು.

ನನ್ನಂತೆ ಸುಶೀಲಾ ಎಂಬವರಿಂದ 5.5 ಲಕ್ಷ ರೂಪಾಯಿ ರತ್ನಾಕರ ಅವರಿಂದ 14ಲಕ್ಷ ರೂಪಾಯಿ  ದಿನೇಶ್ ಎಂಬವರಿಂದ 16 ಲಕ್ಷ ರೂ., ಪದ್ಮನಾಭ ಅವರಿಂದ 7.25 ಲಕ್ಷ ಸುದೀಪ್ ಅವರಿಂದ 7.00 ಲಕ್ಷ ರೂ. ಮಂಜುನಾಥ್ ಅವರಿಂದ 3 .00ಲಕ್ಷ ರೂ ಅಭಿಷೇಕ್ ಅವರಿಂದ 2 .00 ಲಕ್ಷ ರೂ  ಸೌರಭ ಮತ್ತು ಸ್ತ್ರಸ್ಟಿಕ್ ಅವರಿಂದ ತಲಾ  2 .00 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ

2023ರ ಆ.23ರಂದು ಕೆಲಸಕ್ಕೆ ನೇಮಕಾತಿಯ ನೋಟಿಪಿಕೇಶನ್ ಹಾಗೂ ಲೀಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟಡ್ ಎಂಬ 2 ಜೆರಾಕ್ಸ್ ಪ್ರತಿಗಳನ್ನು ನೀಡಿದ್ದು ಆನ್‌ಲೈನ್‌ನಲ್ಲಿ ಬಂದ ನೇಮಕಾತಿಯ ನಿಜವಾದ ಲೀಸ್ಟ್‌ ನೀಡಿ ಅದರಲ್ಲಿ ಹೆಸರು ಇಲ್ಲದ ಕಾರಣ ವಿಚಾರಿಸಿದಾಗ ಹೈಕೋರ್ಟ್ ನಿಂದ ಬೇರೆಯೇ ಲೀಸ್ಟ್ ಬಂದಿರುವುದಾಗಿ ತಿಳಿಸಿದ್ದ ಆರೋಪಿ ವಂಚನೆ ಮಾಡುತ್ತಿದ್ದಾನೆ ಎಂಬುವುದನ್ನು ಅರಿತು ಕೊಟ್ಟ ಹಣ ವಾಪಾಸು ನೀಡುವಂತೆ ತಿಳಿಸಿದಾಗ ಹಣ ನೀಡದೆ ವಂಚನೆ ಎಸಗಿದ್ದಾನೆ. ಒಟ್ಟು 70.25ಲಕ್ಷ ರೂ. ಹಣ ವಂಚನೆ ಎಸಗಿರುವುದಾಗಿ ಅವರು ದೂರಿನಲ್ಲಿ ವಿವರಿಸಿದ್ದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ರಕರ್ತ ದಯಾನಂದ್‌ ಎಂಬಾತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ

ಈ ಪ್ರಕರಣದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮೊತ್ತ ವಂಚಿಸಿದ್ದರಿಂದ ಪ್ರಕರಣವನ್ನು ಉಡುಪಿಯ ಸೆನ್‌ ಪೊಲೀಸ್‌ ಠಾಣೆಗೆ ಹೆಚ್ಚಿನ ತನಿಖೆಗಾಗಿ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ

   

Related Articles

error: Content is protected !!