Home » ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಸುಮಾರು 1.45 ಲಕ್ಷ ರೂಪಾಯಿ ವಂಚನೆ
 

ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಸುಮಾರು 1.45 ಲಕ್ಷ ರೂಪಾಯಿ ವಂಚನೆ

by Kundapur Xpress
Spread the love

ಉಡುಪಿ: ಗ್ಯಾಸ್ ಬುಕ್ಕಿಂಗ್ ಮಾಡಲು ಪಾವಸಿದ ಹಣ ಅಪ್ಡೇಟ್ ಆಗಿಲ್ಲ ಎಂದು ನಂಬಿಸಿ ಸುಮಾರು 1.45 ಲಕ್ಷ ರೂಪಾಯಿ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಲೀಲಿ ಪ್ಲೋರಿನ್ ಡಿಸಿಲ್ವಾ ಇವರು ದಿನಾಂಕ 11/03/2026 ರಂದು ಮನೆಯಲ್ಲಿರುವಾಗ ಬೆಳಿಗ್ಗೆ 11:30 ಗಂಟೆಗೆ ಮಹಾನಗರ ಗ್ಯಾಸ್ ಲಿಮಿಡೆಟ್ ಮುಂಬೈ ನಿಂದ ದೇವೇಶ ಜೋಷಿ ಎಂಬುವವರು ಕರೆ ಮಾಡಿ ಗ್ಯಾಸ್ ಗೆ online ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಪ್ಡೇಟ್ ಆಗಿಲ್ಲ ಎಂದಿದ್ದು, ವಾಟ್ಸಾಪ್ ನಲ್ಲಿ ಮಹಾನಗರ ಗ್ಯಾಸ್ APK APP ಕಳುಹಿಸಿದ್ದು ಅದನ್ನು download ಮಾಡುವಂತೆ ತಿಳಿಸಿರುವಂತೆ ಡೌನ್ ಲೋಡ್ ಮಾಡಿರುತ್ತಾರೆ. ತಾಂತ್ರಿಕ ದೋಷ ಉಂಟಾಗಿರುವುದರಿಂದ ಪುನ: ಸಮಯ ಸುಮಾರು 3:00 ಗಂಟೆಗೆ ಕರೆ ಮಾಡಿ ಅವರ ಗಂಡನ ಕೆನರಾ ಬ್ಯಾಂಕ್ ಸಂತೆಕಟ್ಟೆ ಬ್ಯಾಂಚ್ ಖಾತೆ ಸಂಖ್ಯೆ ಪಡೆದುಕೊಂಡಿರುತ್ತಾರೆ . ಸಮಯ ಸುಮಾರು 4:00 ಗಂಟೆಗೆ ಸಮಯಕ್ಕೆ ಮೊಬೈಲ್ ಗೆ ಮೇಸೆಜ್ ಬಂದಿದ್ದು ನೋಡಲಾಗಿ ದೂರುದಾರರ ICICI ಬ್ಯಾಂಕ್ ಮುಂಬೈ ಬ್ರಾಂಚ್ ಖಾತೆಯಿಂದ 46,636/- ರೂಪಾಯಿ ಮತ್ತು 29,381/- ರೂಪಾಯಿ ಕಡಿತಗೊಂಡಿರುತ್ತದೆ ಮತ್ತು ಅವರ ಗಂಡನ ಕೆನರಾ ಬ್ಯಾಂಕ್ ಸಂತೆಕಟ್ಟೆ ಬ್ಯಾಂಚ್ ಖಾತೆಯಿಂದ 69,005.31/- ರೂಪಾಯಿ ಕಡಿತಗೊಂಡಿರುತ್ತದೆ.

ಲೀಲಿ ಪ್ಲೋರಿನ್ ಡಿಸಿಲ್ವ ಮತ್ತು ಅವರ ಗಂಡನ ICIC ಬ್ಯಾಂಕ್ ಖಾತೆಯಿಂದ ಒಟ್ಟು ರೂ.1,45,022/- ಕಡಿತಗೊಳಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2026 ಕಲಂ: 318(4) BNS & 66(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!