ಕುಂದಾಪುರ : ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯ ನಿವಾಸಿಯಾದ ಕೆ. ದತ್ತಾತ್ರೇಯ ದೇವಾಡಿಗರವರು ಇಂದು ಸಂಜೆಯ ವೇಳೆಗೆ ತೀವ್ರ ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗೆ 71 ವರ್ಷ ವಯಸ್ಸಾಗಿತ್ತು
ದತ್ತು ಅಣ್ಣ ಎಂದೇ ಖ್ಯಾತರಾಗಿದ್ದ ದತ್ತಾತ್ರೇಯರವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಅತ್ಯುತ್ತಮ ಕ್ರೀಡಾಪಟುವಾಗಿದ್ದ ಅವರು ಕಾಲೇಜಿನ ದಿನಗಳಲ್ಲಿ ಅನೇಕ ಕ್ರೀಡೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು
ಕುಂದಾಪುರದ ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕುಂದಾಪುರ ತಾಲೋಕು ದೇವಾಡಿಗರ ಸಂಘದ ಅಧ್ಯಕ್ಷರು ಹಾಗೂ ಸ್ಥಳೀಯ ಮೈಲಾರೇಶ್ವರ ಯುವಕ ಮಂಡಲದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು
ದತ್ತಾತ್ರೇಯರವರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ