Home » ಉಡುಪಿ : ಗೂಂಡಾ ಕಾಯ್ದೆಯಡಿ ಬಂಧನ
 

ಉಡುಪಿ : ಗೂಂಡಾ ಕಾಯ್ದೆಯಡಿ ಬಂಧನ

by Kundapur Xpress
Spread the love

ಉಡುಪಿ:  ನಗರ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿ ಚರನ್‌ ರಾಜ್‌ ಎಂಬವನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಪ್ರಕರಣದ ವಿವರ: ಉಡುಪಿ ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣಾ ಸರಹದ್ದಿನ ರೌಡಿ ಆಸಾಮಿ ಚರಣ್ ರಾಜ್ ಪ್ರಾಯ 29 ವರ್ಷ ತಂದೆ: ಟಿ.ದೇವದಾಸ್ ವಾಸ: 1-124 ಭಂಡಾರ ಹೌಸ್, ಕುಮ್ದೇಲ್, ಪುದು ಗ್ರಾಮ, ಬಂಟ್ವಾಳ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆರವರ ವರದಿಯ ಮೇರೆಗೆ ಮಾನ್ಯ ಜಿಲ್ಲಾ ದಂಡಾಧಿಕಾರಿಯವರು ಹಾಗೂ ಜಿಲ್ಲಾಧಿಕಾರಿಯವರು, ಉಡುಪಿ ಜಿಲ್ಲೆ, ಉಡುಪಿರವರು ದಿನಾಂಕ: 24-06-2026 ರಂದು ಆದೇಶ ಹೊರಡಿಸಿರುತ್ತಾರೆ.

ಗೂಂಡಾ ಆಸಾಮಿಯ ವಿರುದ್ದ ಬಂಟ್ವಾಳ ಗ್ರಾಮಾಂತರ, ಸುರತ್ಕಲ್‌, ಮಂಗಳೂರು ಪೂರ್ವ ಹಾಗೂ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಅಕ್ರಮ ಕೂಟ, ಮಹಿಳೆಯರ ಮೇಲೆ ದೌರ್ಜನ್ಯ, ಮಾದಕ ದ್ರವ್ಯ ಸೇವನೆ, ಮಾದಕ ದ್ರವ್ಯ ಸಾಗಾಟ, ಎಸ್.ಸಿ./ಎಸ್.ಟಿ. ಕಾಯ್ದೆ ಸಹಿತ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 03 ಪ್ರಕರಣಗಳಲ್ಲಿ ಶಿಕ್ಷೆ, 02 ಪ್ರಕರಣಗಳ್ಲಿ ಖುಲಾಸೆ, 04 ಪ್ರಕರಣ ನ್ಯಾಯಾಂಗ ವಿಚಾರಣೆ ಹಾಗೂ ಉಳಿದ 01 ಪ್ರಕರಣ ತನಿಖೆಯಲ್ಲಿರುತ್ತದೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.

 

Related Articles

error: Content is protected !!