Home » ಮನನೊಂದು ಯುವತಿ ಆತ್ಮಹತ್ಯೆ
 

ಮನನೊಂದು ಯುವತಿ ಆತ್ಮಹತ್ಯೆ

by Kundapur Xpress
Spread the love

ಮಂಡ್ಯ : ಮದುವೆ ರದ್ದಾಗಿದ್ದಕ್ಕೆ ನೊಂದು ಕೆ.ಆ‌ರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದ ಕಾವ್ಯಾ (26) ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿಕ್ಕೇರಿಯಲ್ಲಿ ನಡೆದಿದೆ. ಈಕೆ ರೈತಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಹಾಸನದ ಕರ್ಣ ಎಂಬಾತನೊಂದಿಗೆ ನಿಶ್ಚಿತಾರ್ಥ ಆಗಿತ್ತು. ಹುಡುಗನು ಉದ್ಯೋಗದ ಲ್ಲಿ ಇದ್ದಾನೆ ಎಂದು ಆತನ ಮನೆಯವರು ಸುಳ್ಳು ಹೇಳಿದ್ದು ಗೊತ್ತಾಗಿ ವಿವಾಹವನ್ನು ರದ್ದು ಮಾಡಲಾಗಿತ್ತು. ಇದರಿಂದ ನೊಂದ ಯುವತಿ ತಾನು ಕೆಲಸ ಮಾಡುವ ಕಚೇರಿಯಲ್ಲೇ ಕೀಟನಾಶಕ ಸೇವಿಸಿದ್ದು, ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 

Related Articles

error: Content is protected !!