Home » ಪೋಕ್ಸೋ ಪ್ರಕರಣದ ಬಂಧಿತ ಆರೋಪಿ : ಆತ್ಮಹತ್ಯೆ
 

ಪೋಕ್ಸೋ ಪ್ರಕರಣದ ಬಂಧಿತ ಆರೋಪಿ : ಆತ್ಮಹತ್ಯೆ

by Kundapur Xpress
Spread the love

ಬೆಂಗಳೂರು: ಪೋಕ್ಸೋ ಪ್ರಕರಣದ ಬಂಧಿತ ಆರೋಪಿ ಗೌತಮ್ ಆತ್ಮಹತ್ಯೆಗೆ ಶರಣು ಸಿಟಿ ಸಿವಿಲ್ ಕೋರ್ಟ್ ಕಟ್ಟಡದ ಮೇಲಿಂದ ಬಿದ್ದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಬ್ಯಾಂಕ್ ಬಳಿಯ ಸೆಷನ್ಸ್ ಕೋರ್ಟ್‌ನಲ್ಲಿ ಗುರುವಾರ ನಡೆದಿದೆ.

ಟ್ರಯಲ್ ಇದ್ದ ಕಾರಣ ಪರಪ್ಪನ ಅಗ್ರಹಾರದಿಂದ ಮೈಸೂರು ಬ್ಯಾಂಕ್ ಬಳಿಯ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರು ಆರೋಪಿ ಗೌತಮ್ನನ್ನು ಕರೆತಂದಿದ್ದರು. ಆರೋಪಿ ನ್ಯಾಯಾಧೀಶರ ಮುಂದೆ ಹಾಜರಾಗುವ ಮುನ್ನ ಐದನೇ ಮಹಡಿಯ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘಟನೆಯಿಂದ ಕೋರ್ಟ್ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಆತಂಕ ಹರಡಿದ್ದು, ಪೊಲೀಸರು ತನಿಖೆಗೆ ತೊಡಗಿದ್ದಾರೆ. ಸಿಟಿ ಸಿವಿಲ್ ಘಟನೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Related Articles

error: Content is protected !!