61
ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕಾಯರ್ತಡ್ಕ ಎಂಬಲ್ಲಿ ನಡೆದಿದೆ. ಶೇಖರ ಗೌಡ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಶೇಖರ್ ಗೌಡ ಅವರ ಪತ್ನಿ ಸುಮಾರು 4 ತಿಂಗಳ ಹಿಂದೆ ಮೈಗೆ ಬೆಂಕಿ ತಾಗಿ ಚಿಕಿತ್ಸೆ ಪಡೆದರೂ ಇನ್ನು ಸರಿಯಾಗಿ ಗುಣ ಮುಖರಾಗಿರುವುದಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಬೇಸರಗೊಂಡು ಹೆಚ್ಚಾಗಿ ಮದ್ಯ ಸೇವಿಸುತ್ತಿದ್ದರು .
ರಾತ್ರಿ ಮೃತರ ಮಗ ರಾತ್ರಿ ಊಟ ಮಾಡಿ ಮಲಗಿ ಸುಮಾರು 11-30 ಗಂಟೆ ಸಮಯಕ್ಕೆ ಹೊರಗೆ ಬಂದಾಗ ತಂದೆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಹುಡುಕಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಮನೆಯ ಎದುರು ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಮೃತರ ಮಗ ಜಯಂತ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

