ಕುಂದಾಪುರ : ಸಮೀಪದ ಕೋಡಿ ಕಿನಾರೆಯ ಚಕ್ರಮ್ಮ ದೇವಸ್ಥಾನದ ಎದುರುಗಡೆಯ ಸಮುದ್ರ ತೀರದಲ್ಲಿ ಈಜಾಡಲು ತೆರಳಿದ ಮೂವರು ಸಹೋದರರ ಪೈಕಿ ಇಬ್ಬರು ಮ್ರತಪಟ್ಟಿದ್ದಾರೆ ಮತ್ತೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ ಅಂಪಾರು ಮೂಡುಬಗೆಯ ನಿವಾಸಿಯಾದ ಮೂವರು ಸಂಜೆ ಹೊತ್ತಿನಲ್ಲಿ ನೀರಿಗೆ ಇಳಿದಿದ್ದಾರೆ
ಮೂವರ ಪೈಕಿ ಧನರಾಜ್ 23 ವರ್ಷ ದರ್ಶನ್ 18 ವರ್ಷ ಮೃತಪಟ್ಟಿದ್ದಾರೆ ಮತ್ತೋರ್ವ ಸಹೋದರ ಧನುಷ್ 20 ವರ್ಷ ಎಂಬಾತನನ್ನು ರಕ್ಷಿಸಿ ನಗರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ