111
ಬ್ರಹ್ಮಾವರ : ನಿಲ್ಲಿಸಿದ್ದ ಸ್ಕೂಟರಿನ ಸೀಟನ್ನು ತೆರೆದು ಹಣವನ್ನು ಕಾಲವು ಮಾಡಿದ ಘಟನೆ ಬ್ರಹ್ಮಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ನಡೆದಿದೆ.ದಿನಾಂಕ 13.02.2026 ರಂದು ರಾತ್ರಿ 7:15 ಗಂಟೆಯಿಂದ ರಾತ್ರಿ 8:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಬ್ರಹ್ಮಾವರ ಠಾಣಾ ಸರಹದ್ದಿನ ಹಂದಾಡಿ ಗ್ರಾಮದಲ್ಲಿರುವ ಬ್ರಹ್ಮಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ನಿಲ್ಲಿಸಿದ್ದ ಸ್ಕೂಟರ್ ನ ಸೀಟನ್ನು ಓಪನ್ ಮಾಡಿ ಸೀಟಿನ ಕೆಳಗಡೆ ಇರುವ ಡಿಕ್ಕಿಯಲ್ಲಿ ಇಟ್ಟಿದ್ದ ಬ್ಯಾಗ್ ನಲ್ಲಿರುವ ರೂ. 83,800/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಾರ್ಕೂರು ಕಚ್ಚೂರಿನ ನಿವಾಸಿ ಸತೀಶ್ ಮೈಂದನ್ ದೂರು ನೀಡಿದ್ದು ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ:34/2026 ಕಲಂ: 303(2) BNS ರಂತೆ ಪ್ರಕರಣ ದಾಲಿಸಲಾಗಿದೆ.

