Home » ಚಿನ್ನದ ಸರ ಎಗರಿಸಿ ಪರಾರಿ : ಇಬ್ಬರು ಆರೋಪಿಗಳ ಬಂಧನ
 

ಚಿನ್ನದ ಸರ ಎಗರಿಸಿ ಪರಾರಿ : ಇಬ್ಬರು ಆರೋಪಿಗಳ ಬಂಧನ

by Kundapur Xpress
Spread the love

ಕುಂದಾಪುರ:ಬೈಕಿನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಸಂಜಯ್ ಎಲ್ ಮತ್ತು ವಸಂತ ಕುಮಾರ್  ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ‌ ಆರೋಪಿಗಳಿಂದ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೀನಾಕ್ಷಿರವರು ಅವರ ಮಗಳು ಜ್ಯೋತಿಯೊಂದಿಗೆ ಕುಂದಾಪುರ KSRTC ಬಸ್‌ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ BSNL Office ಹತ್ತಿರ ಹಿಂದಿನಿಂದ ಮೋಟಾರ್‌ ಸೈಕಲ್‌ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

 

Related Articles

error: Content is protected !!